‘ಹಗರಣ ಮುಚ್ಚಿಹಾಕಲು ಸಿಎಂ ಯತ್ನ’-ಎಚ್ಡಿಕೆ

cm siddaramaiah trying to close illegal case of mysore minerals-HDK

17-01-2018

ಬೀದರ್: ಮೈಸೂರು ಮಿನರಲ್ಸ್ ನಲ್ಲಿ ನಡೆದ ಅಕ್ರಮಕ್ಕೆ ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ, 5ಸಾವಿರ ಕೋಟಿ ರೂಪಾಯಿಯ ಭಾರೀ ಅಕ್ರಮ ನಡೆದಿರುವುದನ್ನು ಬಯಲಿಗೆ ತಂದಿದ್ದೇನೆ, ಆದರೆ ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಸಿಎಂ ಸಿದ್ದರಾಮಯ್ಯ ಪ್ರಮಾಣಿಕ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಪ್ರಕರಣವನ್ನು ಮುಚ್ಚಿಹಾಕಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೀದರ್ ಪ್ರವಾಸದಲ್ಲಿರುವ ಕುಮಾರ ಸ್ವಾಮಿಯವರು ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ ವಿಚಾರದಲ್ಲಿ ಬಿಜೆಪಿ-ಕಾಂಗ್ರೇಸ್ ಜನರನ್ನು ಕಷ್ಟದ ಪರಿಸ್ಥಿತಿಗೆ ದೂಡಿವೆ ಎಂದು ಆರೋಪಿಸಿದ್ದಾರೆ. ರಾಜ್ಯದ 17 ಲೋಕಸಭೆ ಸದಸ್ಯರಿದ್ದರೂ ಮಹದಾಯಿ ಸಮಸ್ಯೆ ಪರಿಹರಿಸಲಿಕ್ಕೆ ಶಕ್ತಿ ಇಲ್ಲ, ಅದಲ್ಲದೇ ಪತ್ರ ವ್ಯವಹಾರ ನಡೆಸಿರುವುದು ನಾಟಕೀಯ ಬೆಳವಣಿಗೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಚಿತ್ರ ನಟ ಸುದೀಪ್ ಅವರನ್ನು ರಾಜಕೀಯಕ್ಕೆ ಸೆಳೆದು ಅವರನ್ನು ಹಾಳು ಮಾಡುವಷ್ಟು ಸಣ್ಣವನಲ್ಲ, ಸುದೀಪ್ ಭೇಟಿ ಸೌಹಾರ್ದಯುತವಾದ ಭೇಟಿ ಅಷ್ಟೇ ಎಂದರು.

 

 

 


ಸಂಬಂಧಿತ ಟ್ಯಾಗ್ಗಳು

HD kumaraswamy mysore minerals ಸೌಹಾರ್ದ ಹಗರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ