ಪ್ರಿಯಕರನಿಗಾಗಿ ಗಂಡನ ಕೊಲೆ

illegal relationship wife murdered husband

17-01-2018

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದೀಪಾಲಿ ಮತ್ತು ರಾಜಕುಮಾರ್ ಬಂಧಿತ ಆರೋಪಿಗಳು. ಕಳೆದ ಜನವರಿ 8ರಂದು ನಗರದ ಹುಳಿಮಾವಿನಲ್ಲಿ ನಿವಾಸವಿದ್ದ ಮಹೇಶ್ ಶಿಂಧೆ ಎಂಬುವುರನ್ನು, ಮನೆಯಲ್ಲಿಯೇ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಕೊಲೆಯ ಬಳಿಕ ನ್ಯಾಚುರಲ್ ಡೆತ್ ನಂತೆ ಕ್ರಿಯೇಟ್ ಮಾಡಿ ಯಾರಿಗೂ ಅನುಮಾನ ಬರದಂತೆ ಮಾಡಿದ್ದರು. ಮಹೆಶ್ ಶಿಂಧೆ ಆಟೋ ಚಾಲಕನಾಗಿದ್ದು, ಈತನ ಪತ್ನಿ ದೀಪಾಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು.

ಇನ್ನು ಅದೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜಕುಮಾರ್ ಜೊತೆ ದೀಪಾಲಿ ಅಕ್ರಮ ಸಂಬಂಧ ಹೊಂದಿದ್ದಳು. ಗಂಡ ಮನೆಗೆ ಲೇಟಾಗಿ ಬರುವ ಹಿನ್ನೆಲೆಯಲ್ಲಿ ಪ್ರಿಯಕರನನ್ನು ಆಗಾಗ ಮನೆಗೆ ಕರೆದುಕೊಂಡು ಬರುತ್ತಿದ್ದಳು. ಆದರೆ ಕಳೆದ ಜನವರಿ 8ರಂದು ಹುಳಿಮಾವಿನ ಮನೆಯಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಇದೇ ವೇಳೆಗೆ ಕಂಠ ಪೂರ್ತಿ ಕುಡಿದು ಗಂಡನಾದ ಮಹೇಶ್ ಶಿಂಧೆ, ಮನೆಗೆ ಬಂದಿದ್ದ. ಮನೆಯ ಬಾಗಿಲು ಬಡಿದರೂ, ಬಾಗಿಲು ಒಪನ್ ಮಾಡದಿದ್ದು, ಬಾಗಿಲು ತೆರೆಯಲು ತಡ ಮಾಡಿದ್ದಾಳೆ. ಅಷ್ಟರಲ್ಲಿ ಪ್ರಿಯಕರನನ್ನು ಮಂಚದ ಕೆಳಗೆ ಬಚ್ಚಿಟ್ಟು ಬಾಗಿಲು ತೆಗೆದಳು ದೀಪಾಲಿ.

ಮನೆಯೊಳಗೆ ಬಂದ ಮಹೇಶ್ಗೆ ಅನುಮಾನ ಬಂದು ಮನೆ ತಡಕಾಡಿದ್ದಾನೆ. ಈ ವೇಳೆ ಅಕ್ರಮ ಸಂಬಂಧ ಬಯಲಾಗದಿದೆ. ಅಕ್ರಮ ಸಂಬಂಧ ಕಂಡು ರೊಚ್ಚಿಗೆದ್ದ ಪತಿ ಮಹೇಶ್ನನ್ನು ಕಂಡು, ಭಯಗೊಂಡು ದೀಪಲಿ ರಾಜಕುಮಾರ್ ಸೇರಿ ಮಹೇಶ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಕ್ಕಳು ಟ್ಯೂಷನ್ ಮುಗಿಸಿಕೊಂಡು ಮನೆಗೆ ವಾಪಸ್ ಬಂದಿದ್ದು, ಮಕ್ಕಳು ಅಪ್ಪನನ್ನ ಎಬ್ಬಿಸೊಕೆ ಮುಂದಾದಾಗ ತಡೆ ಹಿಡಿದ ತಾಯಿ ದೀಪಾಲಿ, ತಂದೆಗೆ ಹುಷಾರಿಲ್ಲ ಅಂತಾ ಕಥೆ ಕಟ್ಟಿದ್ದಾಳೆ. ನಂತರ ಡಾಕ್ಟರ್ ಅವರನ್ನು ಮನೆಗೆ ಕರೆಸಿ ಚಿಕಿತ್ಸೆ ನೀಡುವಂತೆ ಹೇಳಿದ್ದಾಳೆ. ಮಹೇಶ್ ನನ್ನು ಪರೀಕ್ಷಿಸಿದ ಡಾಕ್ಟರ್ ಸಾವನ್ನಪ್ಪಿರುವುದಾಗಿ, ತಿಳಿಸಿದ್ದರು.

ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ ದೀಪಾಲಿ. ಸ್ಥಳಕ್ಕೆ ಬಂದ ಹುಳಿಮಾವು ಪೊಲೀಸರು ಪರೀಶಿಲನೆ ನಡೆಸಿ, ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾದರು. ಇನ್ನು ತನಿಖೆ ವೇಳೆಯಲ್ಲಿ ಮಹೇಶ್ ನನ್ನ ಕೊಲೆ ಮಾಡಿರೋದಾಗಿ ಪತ್ನಿ ದೀಪಾಲಿ ಬಾಯ್ಬಿಟ್ಟಿದ್ದಾಳೆ.

 

 


ಸಂಬಂಧಿತ ಟ್ಯಾಗ್ಗಳು

murder relationship ಕೊಲೆ ನ್ಯಾಚುರಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ