ಯುವತಿಯರ ಕಳ್ಳ ಸಾಗಾಣೆ: ಮೂವರ ಬಂಧನ

Human trafficking 3 arrested

17-01-2018

ತುಮಕೂರು: ಕೆಲಸ ಕೊಡಿಸೋ ನೆಪದಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳುತಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ತುಮಕೂರಿನ ಕೊರಟಗೆರೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಧುಗಿರಿಯವರಾದ ಭಾಗ್ಯಮ್ಮ, ಭಾಗ್ಯ ನಾಗರಾಜು, ಆಂಧ್ರ ಪ್ರದೇಶದ ನೂರ್ ಜಾನ್ ರನ್ನು ಬಂಧಿಸಿದ್ದಾರೆ. ಇವರೆಲ್ಲರೂ ಕೆಲಸ ಕೊಡಿಸೋ ನೆಪದಲ್ಲಿ, ಯುವತಿಯರ ಕಳ್ಳ ಸಾಗಾಣಿಕೆ ಮಾಡುತಿದ್ದರು. ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  


ಸಂಬಂಧಿತ ಟ್ಯಾಗ್ಗಳು

Prostitution illegal activities ಕಾರ್ಯಾಚರಣೆ ಕೆಲಸ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ