‘ಮುಂದಿನ ತಿಂಗಳಲ್ಲಿ ಕೆಪಿಎಂಇಎ ಕಾಯ್ದೆ ಜಾರಿಗೆ’16-01-2018

ಶಿವಮೊಗ್ಗ: ಫೆಬ್ರವರಿ ಎರಡನೇ ವಾರದಲ್ಲಿ ಕೆಪಿಎಂಇಎ ಕಾಯ್ದೆ ಜಾರಿಗೆ ಬರಲಿದೆ ಎಂದು, ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. ಹೊಸನಗರದಲ್ಲಿಂದು ಮಾತನಾಡಿದ ಅವರು, ಕೆಪಿಎಂಇಎ ಕಾಯ್ದೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಕೆಲಸ ನಡೆಯುತ್ತಿದೆ, ಪಬ್ಲಿಕ್ ಹೆಲ್ತ್ ಫೌಂಡೆಷನ್ ಆಫ್ ಇಂಡಿಯಾ, ಸರ್ಕಾರಿ ವೈದ್ಯರು ಹಾಗೂ ಖಾಸಗಿ ವೈದ್ಯರು ಸೇರಿ ನಿಯಮಾವಳಿಗಳನ್ನು ರೂಪಿಸುತ್ತಿದ್ದಾರೆ ಎಂದು ತಿಳಿಸಿದರು. ಸರ್ಕಾರಿ ನೌಕರರು ಸೇರಿದಂತೆ ಯಾರಿಗೂ ಆರೋಗ್ಯ ಯೋಜನೆಯಡಿ ಹಣ ಮರುಪಾವತಿ ಇಲ್ಲ. ಇನ್ನು ಮುಂದೆ ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ಯೋಜನೆ ಮಾತ್ರ ಜಾರಿಯಲ್ಲಿರಲಿದೆ ಎಂದು ಮಾಹಿತಿ ನೀಡಿದರು. ಎಂಸಿಐ ರದ್ದತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ. ಮೊದಲು ಈ ಬಗೆಗಿನ ಗೊಂದಲವನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ