ಹಜ್ ಯಾತ್ರೆ ಸಬ್ಸಿಡಿ ರದ್ದು…

Govt ends Haj subsidy to pilgrims

16-01-2018

ಕೇಂದ್ರ ಸರ್ಕಾರ ಭಾರತದ ಹಜ್ ಯಾತ್ರಿಕರಿಗೆ ನೀಡುತ್ತಿದ್ದ ಸಹಾಯಧನ ವ್ಯವಸ್ಥೆ ರದ್ದುಪಡಿಸಿದೆ. ಇದು ‘ಅಲ್ಪಸಂಖ್ಯಾತರ ತುಷ್ಟೀಕರಣ ನಿಲ್ಲಿಸಿ, ಅವರನ್ನು ಸಬಲರನ್ನಾಗಿ ಮಾಡುವುದಕ್ಕಾಗಿ ಕೈಗೊಂಡ ಕ್ರಮ’ ಎಂದು ಸರ್ಕಾರ ಹೇಳಿದೆ. ಹಜ್ ಯಾತ್ರೆ ಅಂದರೆ, ಸೌದಿ ಅರೇಬಿಯದಲ್ಲಿರುವ ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು. ‘ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯ ಧನವನ್ನು, ಹೆಚ್ಚಿನ ರೀತಿಯಲ್ಲಿ ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಬಳಸಿಕೊಳ್ಳಲಾಗುವುದು’ ಎಂದು ಅಲ್ಪಸಂಖ್ಯಾತರ ಇಲಾಖೆ ಸಚಿವ ಮುಕ್ತಾರ್ ಆಬ್ಬಾಸ್ ನಕ್ವಿ ಹೇಳಿದ್ದಾರೆ.

ಈ ಬಾರಿ ಭಾರತದಿಂದ ದಾಖಲೆಯ 1.75 ಲಕ್ಷ ಮುಸಲ್ಮಾನರು ಹಜ್ ಯಾತ್ರೆ ಕೈಗೊಳ್ಳಲಿದ್ದು, ಭಾರತದಿಂದ ಹಡಗುಗಳ ಮೂಲಕ ಸೌದಿ ಅರೇಬಿಯಕ್ಕೆ ಪ್ರಯಾಣ ವ್ಯವಸ್ಥೆ ಮಾಡಲು ಎರಡೂ ದೇಶಗಳ ಸರ್ಕಾರಗಳು ಒಪ್ಪಿವೆ, ಹೀಗಾಗಿ, ಸಬ್ಸಿಡಿ ರದ್ದುಪಡಿಸಿದ್ದರೂ ಕೂಡ, ಹಜ್ ಯಾತ್ರೆ ವೆಚ್ಚ ಏರುವುದಿಲ್ಲ ಎಂದು ಮುಕ್ತಾರ್ ಆಬ್ಬಾಸ್ ನಕ್ವಿ ಸ್ಪಷ್ಟಪಡಿಸಿದ್ದಾರೆ.

2012ರಲ್ಲಿ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ, ಹಜ್ ಯಾತ್ರೆ ಸಬ್ಸಿಡಿ ರದ್ದುಪಡಿಸುವಂತೆ ಆದೇಶ ನೀಡಿತ್ತು. ಅಲ್ಲಿಂದ ಕ್ರಮೇಣವಾಗಿ ಸಬ್ಸಿಡಿ ಮೊತ್ತವನ್ನು ಕಡಿಮೆ ಮಾಡಿಕೊಂಡು ಬರಲಾಗಿತ್ತು. 2014ರಲ್ಲಿ 577 ಕೋಟಿ, 2015ರಲ್ಲಿ 529 ಕೋಟಿ ಮತ್ತು 2016ರಲ್ಲಿ 405 ಕೋಟಿ ರೂಪಾಯಿಗಳ ಸಹಾಯ ಧನ ನೀಡಲಾಗಿತ್ತು.


ಸಂಬಂಧಿತ ಟ್ಯಾಗ್ಗಳು

Haj subside ಹಜ್ ಯಾತ್ರೆ ಸುಪ್ರೀಂ ಕೋರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ