ಮೂವರು ದರೋಡೆಕೋರರ ಬಂಧನ

Notorious thief gang arrested

16-01-2018

ಶಿವಮೊಗ್ಗ: ಮುಂಜಾನೆಯಲ್ಲಿ ವ್ಯಾಪಾರಕ್ಕೆ ತೆರಳುತ್ತಿದ್ದವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ದರೋಡೆ ಮಾಡುತ್ತಿದ್ದ ಗ್ಯಾಂಗ್ಅನ್ನು ಭದ್ರಾವತಿಯ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಟಿಪ್ಪು, ಶಮೀವುಲ್ಲಾ ಮತ್ತು ರಫೀಕ್ ಎಂದು ಗುರುತಿಸಲಾಗಿದೆ. ಗ್ರಾಮಾಂತರ ವೃತ್ತ ನಿರೀಕ್ಷಕ ಅಶೋಕ್‍ ಕುಮಾರ್ ನೇತೃತ್ವದ ತಂಡ ಶಿವಮೊಗ್ಗ ಟಿಪ್ಪು ನಗರದಲ್ಲಿ ಮೂವರನ್ನು ಬಂಧಿಸಿದೆ. ವ್ಯಾಪಾರಿಗಳಾದ ಆನಂದ ಮತ್ತು ಚಂದ್ರೋಜಿರಾವ್ ಎಂಬುವರು ಕಳೆದ ಜನವರಿ 10ರಂದು ಬೆಳಿಗ್ಗೆ 3.30ರ ಸಮಯದಲ್ಲಿ ತಾಲ್ಲೂಕಿನ ಬಾರಂದೂರು ಗ್ರಾಮದ ಬಳಿ ಬೊಲೆರೋ ಪಿಕಪ್ ವಾಹನದಲ್ಲಿ ತೆರಳುತ್ತಿದ್ದಾಗ ಟಿಪ್ಪು, ಗೌಸ್, ಸಮೀವುಲ್ಲಾ, ರಫೀಕ್ ಮತ್ತು ಇಮ್ರಾನ್ ಎಂಬ 5 ಮಂದಿ ವಾಹನ ಅಡ್ಡಗಟ್ಟಿ ಚಾಕು ತೋರಿಸಿ ಒಟ್ಟು 4.5 ಲಕ್ಷ ರೂ. ದರೋಡೆ ಮಾಡಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದರೋಡೆಕೋರರ ಬಂಧನಕ್ಕೆ ಬೆನ್ನತ್ತಿದ್ದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ, ಅವರಿಂದ 2.30 ಲಕ್ಷ ರೂ.ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಉಪಾಧೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ, ಗ್ರಾಮಾಂತರ ವೃತ್ತ ನಿರೀಕ್ಷಕ ಅಶೋಕ್‍ ಕುಮಾರ್ ನೇತೃತ್ವದ ತಂಡದ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅಭಿನಂದಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ