ಮಹಿಳಾ ವಸತಿ ಗೃಹಕ್ಕೆ ನುಗ್ಗಿದ ಸೈಕೋ

psychopath entered into women Lodge and Harassed

16-01-2018

ಬೆಂಗಳೂರು: ಹೆಂಗಸರ ಒಳ ಉಡುಪು ಕದಿಯುವ ಸೈಕೋಪಾತ್ ಒಬ್ಬ ಮೆಟ್ರೋ ರೈಲಿನ ಚಾಲಕಿಯರಿಗೆ ಕಿರುಕುಳ ನೀಡಿದ ಹೀನ ಕೃತ್ಯ ಬೈಯಪ್ಪನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲಿಸಿರುವ ಬೈಯಪ್ಪನಹಳ್ಳಿ ಪೊಲೀಸರು ಸೈಕೋ ಚಹರೆ ಆತನ ಚಲನವಲನಗಳ ಮಾಹಿತಿ ಪಡೆದು ಬಂಧಿಸಲು ಕಾರ್ಯಾಚರಣೆ ನಡೆಸಿದ್ದಾರೆ.

ಸೈಕೋ ಕಳೆದ ಜನವರಿ 10ರಂದು ಮಧ್ಯರಾತ್ರಿ 2 ಗಂಟೆಗೆ ಬೈಯಪ್ಪನಹಳ್ಳಿಯ ಬಿಎಂಆರ್‍ಸಿಎಲ್ ವಸತಿಗೃಹದಲ್ಲಿ ನಾಲ್ವರು ಯುವತಿಯರು ವಾಸವಿದ್ದ ಫ್ಲ್ಯಾಟ್‍ಗೆ ನುಗ್ಗಿ, ಮಲಗಿದ್ದ ಯುವತಿಯರ ಬಳಿ ಕುಳಿತುಕೊಂಡಿದ್ದಾನೆ. ಈ ವೇಳೆ ಯುವತಿಯರಲ್ಲಿ ಒಬ್ಬರಿಗೆ ಎಚ್ಚರವಾಗಿ ಕೂಗಿಕೊಂಡಿದ್ದಾರೆ.

ಸೈಕೋ ಚಾಕು ತೋರಿಸಿ ಬೆದರಿಸಿದ್ದರಿಂದ ಸುಮ್ಮನಾದ ಯುವತಿ ಸಾವರಿಸಿಕೊಂಡು ಯಾರು ನೀನು? ಎಲ್ಲಿಂದ ಬಂದಿದ್ದು? ಎಂದು ಕೇಳಿದ್ದಾರೆ. ಸೈಕೋ ಮೊದಲು ನಾನು ವಾಚ್‍ಮನ್ ಎಂದು ಹೇಳಿಕೊಂಡಿದ್ದು, ನಾನು ಕಳ್ಳತನ ಮಾಡುತ್ತಿದ್ದೆ, ಹೀಗಾಗಿ ಮನೆಯಿಂದ ಹೊರಗೆ ಹಾಕಿದ್ದಾರೆ ಎಂದಿದ್ದಾನೆ. ಸೈಕೋ 10 ನಿಮಿಷಗಳ ಕಾಲ ಯುವತಿಯರ ಬಳಿ ಚಾಕು ಹಿಡಿದು ನಿಂತಿದ್ದ. ಬಳಿಕ ಬಾಲ್ಕನಿಗೆ ಹೋಗಿ ಯುವತಿಯರ ಒಳ ಉಡುಪನ್ನು ಮೂಸಿ ನೋಡಿ, ಇದು ನಿನ್ನದ, ನಿನ್ನದ ಎಂದು ನಾಲ್ವರು ಯುವತಿಯರನ್ನು ಕೇಳಿದ್ದಾನೆ. ಯುವತಿಯರು ಭಯದಿಂದ ನನ್ನದಲ್ಲ ನನ್ನದಲ್ಲ ಎಂದು ಹೇಳಿದಾಗ ಸೈಕೋ ಒಳ ಉಡುಪನ್ನು ಬಿಸಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.

ಸೈಕೋ ಮನೆಯಲ್ಲಿ ಕೂತು ಸಿಗರೇಟ್ ಸೇದಿ, ಅಲ್ಲೇ ಉಗಿದಿದ್ದಾನೆ. ನಂತರ ಇಬ್ಬರು ಯುವತಿಯರು ಸೆಕ್ಯುರಿಟಿಯನ್ನ ಕರೆತಂದಿದ್ದಾರೆ. ಘಟನೆಯಿಂದ ಭಯಗೊಂಡ ಮೆಟ್ರೊ ಚಾಲಕಿ ಅರ್ಪಿತಾ ಈ ಬಗ್ಗೆ ಬೈಯಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ವಸತಿಗೃಹ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಇದ್ದು ನೂರಾರು ಮಂದಿ ಉದ್ಯೋಗಗಳು ವಾಸವಾಗಿರುವ ವಸತಿಗೃಹಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರಲಿಲ್ಲ ಎಂದು ತಿಳಿದುಬಂದಿದೆ.

ವಸತಿಗೃಹಕ್ಕೆ ಕೇವಲ 3 ಮಂದಿ ಸೆಕ್ಯೂರಿಟಿ ಗಾರ್ಡ್‍ಗಳಿದ್ದಾರೆ ಸರಿಯಾದ ಭದ್ರತೆ ಇಲ್ಲದಿದ್ದರಿಂದ ಸುಲಭವಾಗಿ ಸೈಕೋ ಒಳನುಗ್ಗಿದ್ದಾನೆ, ವಸತಿ ಗೃಹದ ಒಳಗಿರುವವರೇ ಈ ಕೃತ್ಯ ನಡೆದಿರುವ ಸಾಧ್ಯತೆಯಿದ್ದು ಪ್ರಕರಣ ದಾಖಲಿಸಿರುವ  ಬೈಯಪ್ಪನಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

psychopath Metro ಒಳಉಡುಪು ಸಿಗರೇಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ