ಬಿರುಗಾಳಿ ಸಹಿತ ಮಳೆಯಿಂದಾಗಿ ಧರೆಗುರುಳಿದ ಮರಗಳು

Kannada News

21-04-2017

ಮಂಡ್ಯ:- ಮಂಡ್ಯ ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಮಳೆಯಿಂದಾಗಿ ಧರೆಗುರುಳಿದ ಮರಗಳು. ಮನೆ, ದೇವಾಲಯ ಸೇರಿದಂತೆ ಹಲವು ವಸ್ತುಗಳು ಜಖಂ. ನಿನ್ನೆ ರಾತ್ರಿ ಸುರಿದಿದ್ದ ಮಳೆ. ಮಂಡ್ಯ ತಾಲ್ಲೂಕಿನ ಬಂಕನಹಳ್ಳಿಯಲ್ಲಿ ದೇವಾಲಯದ ಮೇಲೆ ಉರುಳಿದ ಬೃಹತ್ ಅರಳೀಮರ. ಐತಿಹಾಸಿಕ ಈಶ್ವರ ದೇವಾಲಯದ ಮೇಲೆ ಉರುಳಿದ ನೂರು ವರ್ಷದ ಬೃಹತ್ ಅರಳೀಮರ. ದೇವಾಲಯ ಸಂಪೂರ್ಣ ಜಖಂ. ಮದ್ದೂರು, ಕೆಆರ್ ಪೇಟೆ ತಾಲ್ಲೂಕಿನಲ್ಲಿ ಮನೆಗಳ ಮೇಲೆ ಉರುಳಿದ ಮರ.
ಕೆಆರ್ ಪೇಟೆ ತಾಲ್ಲೂಕಿನ, ಮತ್ತಿಘಟ್ಟ ಗ್ರಾಮದಲ್ಲಿ ರೈತ ಬಸವರಾಜ್ ಎಂಬುವವರ ಮನೆ ಮೇಲೆ ಉರುಳಿದ ಮರದಿಂದ ಮೇಲ್ಚಾವಣಿ ಜಖಂಗೊಂಡಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ