ನಡುರಸ್ತೆಯಲ್ಲೇ ಗ್ಯಾಂಗ್ ವಾರ್

gang war in bengaluru

16-01-2018

ಬೆಂಗಳೂರು: ಹಲಸೂರು ಪೊಲೀಸ್ ಠಾಣೆಯ ಸಮೀಪದಲ್ಲಿ ಗಾಂಜಾ ಅಮಲಿನಲ್ಲಿ ಯುವಕರ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು ಸ್ಥಳೀಯರು ಕೆಲ ಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ. ಹುಡುಗಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದು ಯುವಕರು ಬ್ಯಾಟ್, ವಿಕೆಟ್‍ಗಳಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದು ಕಂಠಪೂರ್ತಿ ಕುಡಿದು ಗಾಂಜಾ ಸೇದುತ್ತಿದ್ದ ಹುಡುಗರು ರಸ್ತೆ ಪಕ್ಕ ನಿಂತಿದ್ದ ಕಾರುಗಳನ್ನೂ ಜಖಂ ಮಾಡಿ ರಂಪಾಟ ಮಾಡಿದ್ದಾರೆ.

ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್‍ಗಳನ್ನು ಹಿಡಿದು ಜನರನ್ನು ಹೆದರಿಸುತ್ತಾ ಪರಸ್ಪರ ಎರಡು ಗುಂಪುಗಳು ಬಡಿದಾಡಿಕೊಂಡಿವೆ. ಇದ್ದಕ್ಕಿದ್ದಂತೆ ಯುವಕರ ಗುಂಪು ನಡು ರಸ್ತೆಯಲ್ಲೇ ಮಾರಾಮಾರಿ ಮಾಡಿಕೊಂಡಿದ್ದು ಕೆಲ ಕಾಲ ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು, ಹೊಡೆದಾಟದ ದೃಶ್ಯಗಳೂ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮಾರಾಮಾರಿಯ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಹಲಸೂರು ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲೇ ಈ ಘಟನೆ ನಡೆದರೂ ಪೊಲೀಸರಿಗೆ ಮಾತ್ರ ಈ ಯಾವ ಮಾಹಿತಿಯೂ ಲಭ್ಯವಾಗಿಲ್ಲ ಎನ್ನಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅಲ್ಲಿಗೆ ಪೊಲೀಸರು ಹೋಗುವಷ್ಟರಲ್ಲಿ ಅವರೆಲ್ಲರೂ ಪರಾರಿಯಾಗಿದ್ದರು. ಯುವಕರ ಮಾರಾಮಾರಿ ಹೊಡೆದಾಟದ ಚಿತ್ರೀಕರಿಸಿರುವ ದೃಶ್ಯಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಗಲಾಟೆ ನಡೆಸಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gang war police ಕ್ಯಾಮೆರಾ ಗಲಾಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ