‘ಉತ್ತರ ವಲಯದಲ್ಲಿ ಅಪಘಾತಗಳು ಜಾಸ್ತಿ’16-01-2018

ಬೆಳಗಾವಿ: ಪ್ರತಿದಿನ 5ರಿಂದ 6 ಜನ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು, ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಉತ್ತರ ವಲಯದಲ್ಲಿ ಅಪಘಾತಗಳು ಜಾಸ್ತಿಯಾಗುತ್ತಿವೆ, ಆದ್ದರಿಂದ ಹೆಲ್ಮೆಟ್ ಕಡ್ಡಾಯ ಜಾರಿಗೆ ಜಾಗೃತಿ ನಡೆಸಲಾಗುತ್ತಿದೆ. ಜನವರಿ 26ರಿಂದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಸಂಚಾರಿ ನಿಯಮ ಪಾಲಿಸಿ, ಜೀವ ಉಳಿಸಿ ಅಭಿಯಾನ ಆರಂಭಿಸಿದ್ದೇವೆ ಎಂದರು.

ಇನ್ನು ವಿಧಾನಸಭೆ ಚುನಾವಣೆಗೆ ಪೊಲೀಸ್ ಇಲಾಖೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ. ರಾಜಕೀಯ ಹಿನ್ನೆಲೆಯ ರೌಡಿ ಶೀಟರ್ಗಳ ಮೇಲೆ ನಿಗಾ ವಹಿಸುತ್ತಿದ್ದೇವೆ, ಗಡಿ ಭಾಗದಲ್ಲಿ ವಿಶೇಷವಾಗಿ ಗಮನ ಹರಿಸುತ್ತೇವೆ ಎಂದು ಹೇಳಿದ್ದಾರೆ. ರೌಡಿಗಳ ಪಟ್ಟಿ ಅಪಡೇಟ್ ಮಾಡಿ ರೌಡಿ ಪರೇಡ್ ಮಾಡುತ್ತೇವೆ. ಕೋಮುಗಲಭೆ ರೌಡಿಗಳ ವಿರುದ್ಧವೂ ಕ್ರಮ ಜರುಗಿಸುತ್ತೇವೆ. ಅವಹೇಳನಕಾರಿ ಹೇಳಿಕೆ ಮಾಡುವವರಿಗೆ ಬಾಂಡ್ ಪಡೆಯುತ್ತೇವೆ ಎಂದರು. ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡುವವರ ಮೇಲೆ, ಮೀಟರ್ ಬಡ್ಡಿ , ಮಟ್ಕಾ, ಮರುಳು ದಂಧೆಗೆ, ಕಡಿವಾಣ ಹಾಕುತ್ತೇವೆ ಅಪರಾಧಿ ಹಿನ್ನೆಲೆ ಇರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Alok kumar ACC ಅಪಡೇಟ್ ಕಡಿವಾಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ