‘ಪರಿಕ್ಕರ್ ಗೆ ಮಾನವೀಯತೆ ಇಲ್ಲ’16-01-2018

ಕಲಬುರಗಿ: ಗೋವಾ ಸರಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಹಾಗು ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಅವರು, ಗೋವಾ ಸಿಎಂ ಪರಿಕ್ಕರ್ಗೆ ಮಾನವೀಯತೆ ಇಲ್ಲ, ಪ್ರತಿಯೊಂದು ವಿಷಯದಲ್ಲಿಯೂ ಯುಟರ್ನ್ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ನೀರಿನ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ, ಇದು ಸರಿಯಾದ ಕ್ರಮವಲ್ಲ ಎಂದರು. ಕನ್ನಡಿಗರು ಹರಾಮಿಗಳು ಎಂದಿರುವ ಜಲಸಂಪನ್ಮೂಲನ ಸಚಿವ ವಿನೋದ ಪಾಲ್ಯೇಕರ್ ಹೇಳಿಕೆಯನ್ನು ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ.  ಓರ್ವ ಮಂತ್ರಿಯಾಗಿ ಅನ್ ಪಾರ್ಲಿಮೆಂಟ್ ಶಬ್ದಗಳು ಬಳಸೋದು ಸರಿಯಲ್ಲ, ಆ ಮಾತಿನಿಂದ ಅವರ ಸಂಸ್ಕೃತಿ ತೋರಿಸುತ್ತದೆ. ನಮ್ಮೆದುರು ಮಾತನಾಡೋದನ್ನು ಬಿಟ್ಟು ಸೆಂಟ್ರಲ್ ವಾಟರ್ ಕಮಿಷನ್ ಹತ್ತಿರ ಮಾತನಾಡಿ ನೀರಿನ ಸಮಸ್ಯೆ ಬಗೆಹರಿಸಲಿ,  ಕನ್ನಡಿಗರ ಬಗ್ಗೆ ಹಗುರವಾಗಿ ಮಾತನಾಡೋದು ಸರಿಯಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

malliakharjuna khare vinod palekar ಪರಿಕ್ಕರ್ ಲೋಕಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ