ಮತ್ತೊಮ್ಮೆ ಗೋವಾ ಸಚಿವನ ಉದ್ಧಟತನ

Again controversial statement given by goa irrigation minister

16-01-2018

ಬೆಳಗಾವಿ: ಕನ್ನಡಿಗರಿಗೆ ಮಹದಾಯಿ ನೀರು ಕೊಡುವ ಪ್ರಶ್ನೆಯಿಲ್ಲ ಎಂದು, ಮತ್ತೆ ಗೋವಾ ಸಚಿವ ವಿನೋದ್ ಪಾಲ್ಯೇಕರ್ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಕನ್ನಡಿಗರನ್ನು ಹರಾಮಿಗಳು ಎಂದು ಅವಹೇಳನಕಾರಿ ಹೇಳಿಕೆಯನ್ನೂ ನೀಡಿದ್ದ ಸಚಿವ, ಕ್ಷಮೆಯಾಚಿಸುವ ಬದಲಾಗಿ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಮಹದಾಯಿ ನೀರಿಗಾಗಿ ಕನ್ನಡಿಗರು ಎಷ್ಟೇ ಪ್ರತಿಭಟನೆ ಮಾಡಲಿ, ನಾವು ಮಹದಾಯಿ ನೀರಿನ ಉಳಿವಿಗಾಗಿ ಯಾವುದೇ ಹಂತಕ್ಕೂ ಹೋಗುತ್ತೇವೆ ಎಂದಿದ್ದಾರೆ. ಮಹದಾಯಿಗಾಗಿ ನಮ್ಮ ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಬಿಜೆಪಿ ನೇತೃತ್ವದ ಗೋವಾ ಸರ್ಕಾರ ಯಾವುದೇ ತ್ಯಾಗ ಬಲಿದಾನಕ್ಕೆ ಸಿದ್ಧವಾಗಿದೆ. ಗೋವಾ ರಾಜ್ಯಕ್ಕೆ ಮಹದಾಯಿ ಒಂದೇ ಜಲ ಮೂಲ. ಮಹದಾಯಿ ಅಸ್ತಿತ್ವ ಉಳಿಸಿಕೊಳ್ಳಲು ಯಾವುದೇ ಬಲಿದಾನಕ್ಕೂ ನಾವು ಸಿದ್ಧವಾಗಿದ್ದೇವೆ ಎಂದ ಗೋವಾ ಸಚಿವ ಪಾಲ್ಯೇಕರ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಕರ್ನಾಟಕ ಕಾಮಗಾರಿ ನಡೆಸಿದೆ. ಈ ವಿಚಾರವನ್ನು ನ್ಯಾಯಾಧಿಕರಣದ ಗಮನಕ್ಕೆ ಗೋವಾ ಸರ್ಕಾರ ತರಲಿದೆ. ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದ್ದು, ಗೋವಾ ಸರ್ಕಾರ, ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಿದೆ ಎಂದ ಪಾಲ್ಯೇಕರ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

vinod palekar irrigation minister ಉದ್ದಟತನ ಬಲಿದಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ