ಇರುವುದೆಲ್ಲವ ಬಿಟ್ಟು ಹೊರಟ….

For

16-01-2018

ಲೌಕಿಕ ಜಗತ್ತಿನ ಸುಖಗಳನ್ನು ಪಡೆಯುವುದಕ್ಕಾಗಿ ಏನೆಲ್ಲವನ್ನೂ ಮಾಡಲು ಸಿದ್ಧವಾಗಿರುವ ಜನರೇ ತುಂಬಿರುವ ಈ ಜಗತ್ತಿನಲ್ಲಿ, ಅಲ್ಲೊಮ್ಮೆ ಇಲ್ಲೊಮ್ಮೆ ಇಂಥ ಪ್ರಕರಣಗಳೂ ಕಂಡುಬರುತ್ತವೆ. ಬಾಂಬೆ ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಓದಿದ್ದ ಯುವಕನೊಬ್ಬ, ಜೈನ ಸನ್ಯಾಸಿಯಾಗಲು ಹೊರಟಿದ್ದಾನೆ. ಒಳ್ಳೆಯ ಸಂಬಳ ತರುವ ಉದ್ಯೋಗ ಮತ್ತು ಅಮೆರಿಕದಲ್ಲಿ ಉನ್ನತ ವ್ಯಾಸಂಗದ ಅವಕಾಶ ಹೊಂದಿದ್ದ 29 ವರ್ಷದ ಸಂಕೇತ್ ಪಾರೇಖ್, ಎಲ್ಲವನ್ನೂ ತ್ಯಜಿಸಿ ಸನ್ಯಾಸ ದೀಕ್ಷೆ ಪಡೆಯುತ್ತಿದ್ದಾನೆ. ವೈಷ್ಣವ ಸಂಪ್ರದಾಯದ ಕುಟುಂಬದಲ್ಲಿ ಹುಟ್ಟಿದ ಸಂಕೇತ್, ಒಂದು ಕಾಲದಲ್ಲಿ ನಾಸ್ತಿಕವಾದಿಯಾಗಿದ್ದ.

ಎಂಜಿನಿಯರಿಂಗ್ ಪದವಿ ಅಂತಿಮ ವರ್ಷದಲ್ಲಿದ್ದಾಗ, ತನ್ನ ಮುಂದಿನ ಜೀವನದ ಬಗ್ಗೆ ಚಿಂತಿಸತೊಡಗಿದ್ದ. ಅಷ್ಟು ಹೊತ್ತಿಗಾಗಲೇ ಅಧ್ಯಾತ್ಮದ ಸೆಳೆತಕ್ಕೆ ಸಿಲುಕಿದ್ದ ಗೆಳೆಯ ಭವಿಕ್ ಶಾ ಜೊತೆ ಮಾತನಾಡುವಾಗ ಶರೀರ, ಮನಸ್ಸು ಮತ್ತು ಆತ್ಮದ ಪರಿಕಲ್ಪನೆಗಳ ಬಗ್ಗೆ ಚರ್ಚಿಸಿದ್ದಾನೆ. ಪದವಿ ಮುಗಿಸಿದ ನಂತರ ಎರಡೂವರೆ ವರ್ಷಗಳ ಕಾಲ ಆಚಾರ್ಯ ಯುಗಭೂಷಣ್‌ ಅವರ ಬಳಿ ಜೈನ ಧರ್ಮದ ಬಗ್ಗೆ ಅಧ್ಯಯನ ನಡೆಸಿದ ಸಂಕೇತ್, ಇದೀಗ ತಂದೆ, ತಾಯಿ, ಬಂಧು ಬಳಗ, ಕಂಪ್ಯೂಟರ್, ಸ್ಮಾರ್ಟ್ ಫೋನ್ ಜೊತೆಗೆ ಜಗತ್ತಿನಲ್ಲಿ ಎಲ್ಲರೂ ಹಂಬಲಿಸುವ ಬಗೆ ಬಗೆಯ ಸುಖಗಳನ್ನು ತ್ಯಜಿಸಿ ಸನ್ಯಾಸ ದೀಕ್ಷೆ ಪಡೆಯುತ್ತಿದ್ದಾನೆ.


ಸಂಬಂಧಿತ ಟ್ಯಾಗ್ಗಳು

diksha IIT ಐಐಟಿ ವೈಷ್ಣವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ