ಪೊಲೀಸರ ಕಿರುಕುಳ ಯುವಕ ಆತ್ಮಹತ್ಯೆ...!

Harassment of police: Young man commits suicide ...!

16-01-2018

ಕಲಬುರಗಿ: ಹೊಸ ವರ್ಷಾಚರಣೆ ವೇಳೆ ಮದ್ಯ ಸೇವಿಸಿದ್ದಾನೆಂದು ವಿಚಾರಣೆಗೆ ಗುರಿಪಡಿಸಿದ್ದ ಯುವಕನೊಬ್ಬ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು, ಕಲಬುರಗಿಯಲ್ಲಿ ನಡೆದಿದೆ. ಜಿಲ್ಲೆಯ ಜೇವರ್ಗಿ ಪಟ್ಟಣದ ಖಾಜಾ ಕಾಲೋನಿಯ ರಾಮು(18) ಮೃತ ದುರ್ದೈವಿ. ಹೊಸ ವರ್ಷಾಚರಣೆ ವೇಳೆ, ಮದ್ಯ ಸೇವಿಸಿ ದಾಂಧಲೆ ನಡೆಸಿದ್ದಾನೆ ಎಂದು ಪೊಲೀಸರು  ರಾಮುನನ್ನು ಬಂಧಿಸಿ ಬಿಡುಗಡೆಗೊಳಿಸಿದ್ದರು. ನಂತರ ಜೇವರ್ಗಿಗೆ ವಾಪಸ್ಸಾಗಿದ್ದ ಯುವಕನನ್ನು ಮತ್ತೆ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರ ಕಿರುಕುಳದಿಂದಲೇ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಯುವಕನ ಪೋಷಕರು ಆರೋಪಿಸಿದ್ದಾರೆ. ಇನ್ನು ಸ್ಥಳಕ್ಕೆ ಜೇವರ್ಗಿ ಪೊಲೀಸರ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide death ಬಿಡುಗಡೆ ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ