ಎಟಿಎಂ ಮೆಷಿನ್ ಕಳವಿಗೆ ಯತ್ನ

Attempt to steal an ATM machine

16-01-2018

ಶಿವಮೊಗ್ಗ: ಕೆನರಾ ಬ್ಯಾಂಕ್ ಎಟಿಎಂ ಕಳ್ಳತನಕ್ಕೆ ಮುಂದಾಗಿದ್ದ ಮೂವರು ಕಳ್ಳರನ್ನು ಬಂಧಿಸಿರುವ ಘಟನೆಯು ಶಿಮೊಗ್ಗದಲ್ಲಿ ನಡೆದಿದೆ. ಎಟಿಎಂ ಶೆಟರ್ ಮುರಿದು ಒಳಗಿನಿಂದ ಬಾಗಿಲು ಹಾಕಿಕೊಂಡು ಎಟಿಎಂ ಯಂತ್ರ ಕದಿಯಲು ಅಣಿಯಾಗಿದ್ದರು. ತಕ್ಷಣ ಜಾಗೃತರಾದ ಗ್ರಾಮದ ಯುವಕರು ಹೊರಗಿನಿಂದ ಲಾಕ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ತುಂಗಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಗಿರೀಶ್ ಅವರು, ಸಿನಿಮೀಯ ಮಾದರಿಯಲ್ಲಿ ಮೂವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.  ಕಾರ್ಯಾಚರಣೆ ವೇಳೆ ಉಳಿದ ಮೂವರು ಪರಾರಿಯಾಗಿದ್ದಾರೆ. ಪರಾರಿಯಾದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೂವರು ಆರೋಪಿಗಳು ತುಂಗಾನಗರ ಪೊಲೀಸರ ವಶದಲ್ಲಿದ್ದು ವಿಚಾರಣೆಗೊಳಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Canara Bank Robbery ಎಟಿಎಂ ಯಂತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ