ಬೀದರ್: ಪೆಟ್ರೋಲ್ ಬಂಕ್ ತೆರವು

Bidar: Petrol bunk demolition

16-01-2018

ಬೀದರ್: ಬೀದರ್ ನ ಪ್ರತಾಪ ನಗರದಲ್ಲಿರುವ ಸಾಯಿ ಪೆಟ್ರೋಲ್ ಬಂಕ್ ತೆರವಿಗೆ ನಗರಸಭೆ ಆದೇಶಿಸಿದೆ. ಅನಧಿಕೃತವಾಗಿ ಈ ಪೆಟ್ರೋಲ್ ಬಂಕ್ ತಲೆ ಎತ್ತಿದ್ದು, ಯಾವುದೇ ಕಾಲಾವಕಾಶ ನೀಡದೆ ಬೆಳ್ಳಂ ಬೆಳಿಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ. ಲಿಂಗಾಯತ ಸಮನ್ವಯ ಸಮಿತಿ ಸದಸ್ಯ ಶ್ರೀಕಾಂತ ಸ್ವಾಮಿ ಒಡೆತನದ ಪೆಟ್ರೋಲ್ ಬಂಕ್ ಎಂದು ತಿಳಿದು ಬಂದಿದೆ. ಈ ಕುರಿತಾಗಿ ಶ್ರೀಕಾಂತ್ ಸ್ವಾಮಿ, ಲಿಂಗಾಯತ ಸ್ವತಂತ್ರ್ಯ ಧಮ೯ದ ಹೊರಾಟ ಮಾಡಿದ್ದಕ್ಕೆ ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ, ಸಚಿವ ಈಶ್ವರ ಖಂಡ್ರೆ ಅವರ ಕುಮ್ಮಕ್ಕಿನಿಂದ ತೆರವು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಪೆಟ್ರೋಲ್ ಬಂಕ್ ತೆರವು ಮಾಡುತ್ತಿರುವುದರಿಂದ, ನಗರಸಭೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

petrol bunk eshwar khandre ರಾಜಕಾರಣ ತೆರವು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ