2 ದಿನಗಳ ನಂತರ ಬಾಲಕನ ಶವ ಪತ್ತೆ

Vjayapura: A boy dead body detected after days

15-01-2018

ವಿಜಯಪುರ: ವಿಜಯಪುರದಲ್ಲಿ ಜನವರಿ 13ರಂದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರಲ್ಲಿ ಒಬ್ಬ ಬಾಲಕನ ಶವ, ಮುದ್ದೇಬಿಹಾಳದ ದೊಡ್ಡ ಕೆರೆಯಲ್ಲಿ ಪತ್ತೆಯಾಗಿದೆ. ಅಜಯ್ ನರಸಲಗಿ(11) ಎಂದು ಮೃತ ಬಾಲಕನ್ನು ಗುರುತಿಸಲಾಗಿದೆ. ಕಳೆದೆರಡುದಿನಗಳ ಹಿಂದಷ್ಟೇ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ  ಬಾಲಕ ಲೊಕೇಶ ತಟ್ಟಿ(12) ಶವ ಪತ್ತೆಯಾಗಿತ್ತು. ಇನ್ನುಎರಡು ದಿನಗಳ ಬಳಿಕ ಇಂದು ಮತ್ತೋರ್ವ ಬಾಲಕನ ಶವ ಪತ್ತೆಯಾಗಿದೆ. ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಇಬ್ಬರು ಬಾಲಕರು ಸಾವನ್ನಪ್ಪಿದ್ದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪೊಲೀಸರು ಶವ ಹುಟಡುಕವಲ್ಲಿ ನೆರವು ನೀಡಿದ್ದಾರೆ. ಇನ್ನು ಬಾಲಕರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


ಸಂಬಂಧಿತ ಟ್ಯಾಗ್ಗಳು

death lake ಮುದ್ದೇಬಿಹಾಳ ನೆರವು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ