‘ವಿವಾದಿತ ಜಾಗಕ್ಕೆ ಭೇಟಿ ಕೊಟ್ಟಿದ್ದು ದೊಡ್ಡ ತಪ್ಪು’

"Visiting to controversial place it is wrnog

15-01-2018

ಬೆಂಗಳೂರು: ಯಾವುದೇ ಮಂತ್ರಿಯಾದರೂ ಸರಿಯೇ, ಅವರ ನಾಲಿಗೆ ಮೇಲೆ ಹಿಡಿತವಿರಬೇಕು. ನಮ್ಮ ಜಾಗಕ್ಕೆ ಬಂದಿದ್ದೇ ಮೊದಲ ತಪ್ಪು, ಜೊತೆಗೆ ಕೆಳಮಟ್ಟದ ಹೇಳಿಕೆಯನ್ನು ನಿಡಿದ್ದಾರೆ ಎಂದು, ಕನ್ನಡಿಗರ ಬಗ್ಗೆ ಅವಹೇಳಕಾರಿಯಾರಿ ಮಾತನಾಡಿದ ಗೋವಾ ಸಚಿವ, ವಿನೋದ್ ಪಾಳೇಕರ್ ವಿರುದ್ಧ ಕಾನೂನು ಸಚಿವ ಟಿ.ಬಿ ಜಯಚಂದ್ರ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಮಹದಾಯಿ ವಿಚಾರವನ್ನೇ ಒಂದು ದೊಡ್ಡ ರಾಜಕೀಯ ವಿಷಯವನ್ನಾಗಿಸಿದ್ದಾರೆ, ಅವರ ಧ್ವೇಷ ಅವರ ಮಾತಿನಿಂದಲೇ ಗೊತ್ತಾಗುತ್ತದೆ. ಕೋರ್ಟ್ ನಲ್ಲಿ ಕೂಡ ಅವರು ಸಹಕರಿಸಿಲ್ಲ. ಅಲ್ಲದೇ ಈ ವಿಚಾರಕ್ಕೆ ರಾಜಕೀಯ ಬಣ್ಣ ಬಳಿಯೋಕೆ ಹೊರಟಿದ್ದಾರೆ ಎಂದು ದೂರಿದರು. ಪಾಳೇಕರ್ ಹೇಳಿಕೆಯನ್ನು ಖಂಡಿಸುತ್ತೇನೆ. ವಿವಾದಿತ ಜಾಗಕ್ಕೆ ಭೇಟಿ ಕೊಟ್ಟಿದ್ದು ದೊಡ್ಡ ತಪ್ಪು ಎಂದ ಅವರು ಈ ಕುರಿತು ಮೊದಲು ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು. ತದನಂತರದಲ್ಲಿ ಜಂಟಿಯಾಗಿ ಭೇಟಿ ಕೊಡಬಹುದಿತ್ತು. ಆದರೆ ಏಕಾಏಕಿ ಭೇಟಿ ಕೊಟ್ಟು ಕನ್ನಡಿಗರ ಬಗ್ಗೆ ಅವಹೇಳನ ಮಾಡಿದ್ದು ದೊಡ್ಡ ತಪ್ಪು ಎಂದು ವಿನೋದ್ ಪಾಳೇಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೋವಾ ಸಚಿವರಿಗೆ ನಾಲಿಗೆ ಮೇಲೆ ಹಿಡಿತವಿರಲಿ. ಕನ್ನಡಿಗರ ಮೇಲೆ ಗೋವಾರ ಸಚಿವರು ದ್ಷೇಷ ಕಾರುತ್ತಿದ್ದಾರೆ. ರಾಜ್ಯದ ವಿವಾದಾತ್ಮಕ ಸ್ಥಳಕ್ಕೆ ಭೇಟಿ ನೀಡಬಾರದಿತ್ತು. ಬಂದು ಹೀಗೆಲ್ಲಾ ಹೇಳೋದು ಸರಿಯಲ್ಲ. ಅವರು ಬಂದ್ರೆ ತೊಂದರೆ ಕೊಡ್ತೀವಿ ಅಂತಾ ಕನ್ನಡಿಗರು ಹೇಳಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

T.B jyachandre politician ಮಂತ್ರಿ ವಿವಾದಾತ್ಮಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ