ದೀಪಕ್ ರಾವ್ ಮನೆಗೆ ರಾಮಲಿಂಗಾರೆಡ್ಡಿ ಭೇಟಿ

Ramalinga reddy visited deepak Rao home

12-01-2018 486

ಮಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ನಿವಾಸಕ್ಕೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ, ದೀಪಕ್ ತಾಯಿ ಮತ್ತು ಸಹೋದರ ಸತೀಶ್ಗೆ ಸಾಂತ್ವನ ಹೇಳಿದ್ದಾರೆ. ಹತ್ಯೆ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ತನಿಖೆ ನಡೆಸುವ ಭರವಸೆ ಕುಟುಂಬಸ್ಥರಿಗೆ ನೀಡಿದರು. ಈ ವೇಳೆ ಸಚಿವರಿಗೆ ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ಸಾಥ್ ನೀಡಿದರು.

ತದನಂತರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ವಿವೇಕಾನಂದ ಜಯಂತಿ ಮಾಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸ್ವಾಮಿ ವಿವೇಕಾನಂದ ಜಾತಿ ಧರ್ಮ ಮೀರಿದ ವ್ಯಕ್ತಿ, ಅವರ ಜಯಂತಿ ಯಾವತ್ತೂ ಆಚರಿಸಬಹುದು ಎಂದರು. ಅಲ್ಲದೇ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಯಾಕೆ ಜಯಂತಿ ಆಚರಿಸಿಲ್ಲ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕೋ ಯತ್ನ ಮಾಡುತ್ತಿದೆ ಎಂದು ದೂರಿದರು.


ಸಂಬಂಧಿತ ಟ್ಯಾಗ್ಗಳು

Ramalinga reddy deepak rao ಶಾಸಕ ವಿವೇಕಾನಂದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ