‘ಬಿಜೆಪಿಯವರು ನಾಟಕ ಕಂಪನಿ ಇದ್ದಂತೆ’12-01-2018

ಹುಬ್ಬಳ್ಳಿ: ರಾಜ್ಯದಲ್ಲಿ ಒಂದೇ ದಿನ ಮತದಾನ ಮಾಡುವ ಚುನಾವಣಾ ಆಯೋಗದ ನಿರ್ಧಾರ ಸ್ವಾಗತಾರ್ಹ ಎಂದು, ಮಾಜಿ‌ ಸಚಿವ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಎರಡೆರಡು ಬಾರಿ ಮತದಾನ ನಡೆದರೆ ಗೊಂದಲ, ಮತಪೆಟ್ಟಿಗೆ ಕಳುವಿನಂತ ಪ್ರಕರಣಗಳು ನಡೆಯುವ ಸಾಧ್ಯತೆಗಳಿರುತ್ತವೆ. ಕರ್ನಾಟಕದಲ್ಲಿ ಮತದಾನ ಒಂದೇ ದಿನ ನಡೆಯೋದು ಸೂಕ್ತ ಎಂದರು.

ಇನ್ನು ಇವಿಎಂ ಬಗ್ಗೆ ಗುಜರಾತ್ ನಲ್ಲಿ ಒಂದಿಷ್ಟು ಗೊಂದಲಗಳಿರೋದು ನಿಜ, ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರೂ ಸಹ ಇವಿಎಂ ಬೇಡ ಅಂತಿದ್ದಾರೆ. ಇವಿಎಂ ಬಗ್ಗೆ ಪರ-ವಿರೋಧ ಚರ್ಚೆಗಳು ನಡೀತಿವೆ. ಚುನಾವಣಾ ಆಯೋಗ ಇವಿಎಂ ಬಗೆಗಿನ ಗೊಂದಲವನ್ನು ಸರಿಪಡಿಸಬೇಕು. ಇವಿಎಂಗಳ ಬಗ್ಗೆ ಒಂದು ಪಕ್ಷ ಮತ್ತೊಂದು ಪಕ್ಷದ ಮೇಲೆ, ಮತ್ತೊಂದು ಪಕ್ಷ ಇನ್ನೊಂದರ ಮೇಲೆ ಅಪಾದನೆ ಮಾಡುತ್ತಿವೆ, ಇದೆಲ್ಲ ಆಗದಂತೆ ಇನ್ಮೇಲಾದ್ರೂ ಚುನಾವಣಾ ಆಯೋಗ ಸರಿಪಡಿಸಬೇಕು, ವೈಯಕ್ತಿಕವಾಗಿ ಹೇಳೋದಾದ್ರೇ ನಾನು ಇವಿಎಂ ಬೇಕು ಅಂತಾ ಹೇಳುವೆ ಎಂದರು.

ಇನ್ನು ಗೋವಾ ಸಿಎಂ ಮನೋಹರ್ ಪರಿಕ್ಕರ್ ಬಗ್ಗೆ ನಾನ್ ಮಾತಾಡೋದು ಸರಿಯಲ್ಲ ಅನ್ಸುತ್ತೆ. ಬಿಜೆಪಿಯವರು ಒಂದು ರೀರಿ ನಾಟಕ ಕಂಪನಿ ಇದ್ದಂತೆ. ಪರಿಕ್ಕರ್ ಬರೆದಿದ್ದ ಪತ್ರವನ್ನು ಯಡಿಯೂರಪ್ಪ ಸಾಹೇಬ್ರು ಓದಿದ್ರು, ಈಗ ಅದೇ ಗೋವಾ ಸಿಎಂ ಪರಿಕ್ಕರ್ ಉಲ್ಟಾ ಹೊಡೆದಿದ್ದಾರೆ. ನಾನು ಅವತ್ತೇ ಹೇಳಿದ್ದೇ ಇದೆಲ್ಲ ಸರಿಯಾದ ಕ್ರಮವಲ್ಲ, ಉತ್ತರ ಕರ್ನಾಟಕದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದ್ದೆ, ಇಲ್ಲ ಜನರಿಗೆ ಸಿಹಿ ಸುದ್ದಿ ಕೊಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಈಗ ಬಿಜೆಪಿಯವರು ಜನರಿಗೆ ಸಿಹಿ ಕೊಟ್ಟಿಲ್ಲ, ಬರೀ ಕಹಿ ಕೊಟ್ಟಿದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬರೀ ಪರಿಕ್ಕರ್ ಅಷ್ಟೇ ಅಲ್ಲ, ನಾವು ಬಿಜೆಪಿಯವರನ್ನು ನಂಬೋದೇ ಇಲ್ಲ. ಪ್ರಧಾನಮಂತ್ರಿಗಳೇ ಮಧ್ಯ ಪ್ರವೇಶಿಸಿ ಮಹದಾಯಿ ವಿವಾದ ಇತ್ಯರ್ಥಪಡಿಸಲಿ, ಪ್ರಧಾನಿ ಮೋದಿಯವರಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ, ಇಲ್ಲದಿದ್ರೇ ಮಹದಾಯಿ ವಿವಾದ ಇತ್ಯರ್ಥವಾಗೋದಕ್ಕೆ ಸಾಧ್ಯವೇ ಇಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

basavaraj horatti JDS ಇತ್ಯರ್ಥ ಪರಿಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ