ತಾಪಂ ಕಚೇರಿ ಮೇಲೆ ಎಸಿಬಿ ದಾಳಿ

ACB Raid on taluk panchayat office

12-01-2018 507

ಬಾಗಲಕೋಟೆ: ಲಂಚ ಪಡೆಯುತ್ತಿದ್ದ ತಾಲ್ಲೂಕು ಪಂಚಾಯಿತಿಯ ನೌಕರನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ಬಾಗಲಕೋಟೆ ಜಿಲ್ಲೆಯ ತಾಲ್ಲೂಕು ಪಂಚಾಯತಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಲಂಚ ಪಡೆಯುತ್ತಿದ್ದ ತಾಪಂ ನೌಕರ ಪಾಂಡು ಲಮಾಣ ಎಂಬುವರು ಎಸಿಬಿ ಬಲೆಗೆ ಬಿದ್ದಿದ್ದಾರೆ, ಅಂಗವಿಕಲ ಫಲಾನುಭವಿಗಳಿಂದ ಲಂಚ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ. ತ್ರಿಚಕ್ರವಾಹನ‌ ಮಂಜೂರಾತಿಗಾಗಿ 20 ಸಾವಿರ ಬೇಡಿಕೆ ಇಟ್ಟಿದ್ದ, ಇದರಂತೆ 18 ಸಾವಿರ ಪಡೆಯುವಾಗ ಕಚೇರಿಯಲ್ಲಿಯೇ ಎಸಿಬಿ ಅಧಿಕಾರಿಗಳ ಗಾಳಕ್ಕೆ ಸಿಕ್ಕಿಬಿದ್ದಿದ್ದಾನೆ.

ಅದಲ್ಲದೇ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತನ್ನು ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಪ್ರವೀಣ್ ಕುಮಾರ ಹೂಗಾರ, ಸಂಕಪ್ಲ ಹುಲ್ಯಾಳ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಎಸಿಬಿ ಡಿವೈ ಎಸ್ ಪಿ, ಎಮ್ ವಿ ಮಲ್ಲಾಪುರ, ಇನ್ಸ್ ಪೆಕ್ಟರ್ ರಾಘವೇಂದ್ರ ಹಳ್ಳೂರ, ಚಂದ್ರಶೇಖರ್ ‌ಮಠಪತಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Zilla panchyath ACB ಲಂಚ ತ್ರಿಚಕ್ರವಾಹನ‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ