ಮೈಸೂರು ವಿ.ವಿಯಲ್ಲಿ ಮುಂದುವರೆದ ಕಿತ್ತಾಟ

Kannada News

19-04-2017

ಮೈಸೂರು: ಮೈಸೂರು ವಿವಿಯಲ್ಲಿ ಕುಲಪತಿ ಕುಲಸಚಿವರ ನಡುವೆ ಮುಂದುವರೆದ ಕಿತ್ತಾಟ. ಹಂಗಾಮಿ ಕುಲಪತಿ ಮಾಡಿರುವ ಆರೋಪ ತಳ್ಳಿಹಾಕಿದ ಕುಲಸಚಿವ ಪ್ರೊ.ರಾಜಣ್ಣ. 
ವಿವಿಯಲ್ಲಿ ಉದ್ದಟತನದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಹಂಗಾಮಿ ಕುಲಪತಿ ಪ್ರೊ.ದಯಾನಂದ ಮಾನೆ. 
ಪ್ರೊ.ರಾಜಣ್ಣ ಅಕ್ರಮ ನೇಮಕಾತಿ ಮಾಡಿ, ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. 
ನಾನು ಯಾವುದೇ ಅಕ್ರಮ ನೇಮಕಾತಿ ಮಾಡಿಲ್ಲ. ಯಾವೊಬ್ಬ ಸಿಬ್ಬಂದಿಯನ್ನು ವರ್ಗಾವಣೆ ಅಥವಾ ಅಮಾನತು ಮಾಡಿಲ್ಲ. 
ಎಲ್ಲವು ವಿವಿಯ ಕಾನೂನಿನ ಅಡಿಯಲ್ಲೆ ಆಗಿದೆ. ನಿಷ್ಠಾವಂತ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿರುವುದಕ್ಕೆ ನನ್ನನ್ನು ವಿರೋಧಿಸುತ್ತಿದ್ದಾರೆ. ನನ್ನ ಮೇಲೆ ಪಟ್ಟಭದ್ರ ಹಿತಾಸಕ್ತಿಗಳಿಂದ ಸಂಚು ನಡೆಯುತ್ತಿದೆ. ಕಪ್ಪುಚುಕ್ಕೆ ಇರಿಸಲು, ನನ್ನ ತೇಜೋವಧೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆಂದು ಮೈಸೂರು ವಿವಿ ಹಂಗಾಮಿ ಕುಲಪತಿ ದಯಾನಂದ ಮಾನೆ ವಿರುದ್ದ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಕುಲಸಚಿವ ರಾಜಣ್ಣ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ