'ಉದ್ದೇಶ ಪೂರ್ವಕವಾಗಿ ಐಟಿ ದಾಳಿ ಮಾಡಿಸಲಾಗುತ್ತಿದೆ'12-01-2018

ಮಂಡ್ಯ: ಸಿಎಂ ಆಪ್ತರ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಉದ್ದೇಶ ಪೂರ್ವಕವಾಗಿ ಐಟಿ ದಾಳಿ ಮಾಡಿಸಲಾಗುತ್ತಿದೆ, ಇನ್ ಕಮ್ ಟ್ಯಾಕ್ಸ್ ಕೇಂದ್ರದ ಬಳಿ ಇದ್ದು ಅದನ್ನು, ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು. ಬಿಜೆಪಿಯವರಿಂದ ಕಾಂಗ್ರೆಸ್ ವಿರುದ್ಧ ಚಾರ್ಜ್ ಶೀಟ್ ಸಿದ್ಧತೆ ವಿಚಾರವಾಗಿ ಮಾತನಾಡಿ. ನಮ್ಮಲ್ಲೂ ಕೇಂದ್ರ ಸರ್ಕಾರದ ಮೇಲಿನ ಚಾರ್ಜ್ ಶೀಟ್ ಇದೆ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಕಾಂಕ್ಷಿಗಳು ಹೆಚ್ಚಿರಬೇಕು ಎಂದ ಅವರು, ಇಂದು ಕೊನೆಯ ಸಾಧನ ಸಮಾವೇಶವಾಗಿದ್ದು, ನಿರೀಕ್ಷೆಗೂ ಮೀರಿ ಜನರ ಒಲವು ವ್ಯಕ್ತವಾಗಿದೆ ಎಂದರು.

ಬಂಡಾಯ ಶಾಸಕರ ಪಕ್ಷ ಸೇರ್ಪಡೆ ವಿಚಾರವಾಗಿ, ಹೈ ಕಮಾಂಡ್ ಜೊತೆ ಮಾತಾಡಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು. ನಾಳೆ ದೆಹಲಿಗೆ ಭೇಟಿ ನೀಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಚುನಾವಣೆ ಇರುವುದರಿಂದ ಹೈಕಮಾಂಡ್ ನಿಂದ ಬುಲಾವ್ ಬಂದಿದೆ, ಇನ್ನು 27ರಿಂದ 29ರವರೆಗೆ ಮೂರು ದಿನ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

siddaramaiah sadhana samavesha ದೆಹಲಿ ಹೈಕಮಾಂಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ