ಬಸ್ ಕಂಡಕ್ಟರ್ ನ ಅಮಾನವೀಯ ವರ್ತನೆ

The inhuman behavior of the bus conductor

12-01-2018

ಬೆಂಗಳೂರು: ಪ್ರಯಾಣದ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ ಮತ್ತು ಆತನ ಜೊತೆ ಪ್ರಯಾಣಿಸುತ್ತಿದ್ದ ಸ್ನೇಹಿತನನ್ನು ಬಸ್‍ ನಿರ್ವಾಹಕ ಮಾರ್ಗ ಮಧ್ಯೆಯೇ ಇಳಿಸಿ ಹೋಗಿರುವ ಅಮಾನವೀಯ ಘಟನೆ ಹೊಸೂರಿನ ಸೂಲಗಿರಿ ಬಳಿ ಘಟನೆ ನಡೆದಿದೆ. ನಗರದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ರಾಧಾಕೃಷ್ಣನ್ (43) ಹಾಗೂ ಅವರ ಗೆಳೆಯ ವೀರನ್ (54) ಬೆಂಗಳೂರಿನಿಂದ ತಮಿಳುನಾಡಿನ ತಿರುವಣ್ಣಮಲೈಗೆ ಸರ್ಕಾರಿ ಬಸ್‍ನಲ್ಲಿ ತೆರಳುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ವೀರನ್ ಬಸ್‍ನಲ್ಲಿ ಮಲಗಿದ್ದರು.

ಸ್ವಲ್ಪ ಸಮಯದ ನಂತರ ರಾಧಾಕೃಷ್ಣನ್ ಮಲಗಿದ್ದ ವೀರನ್ ನನ್ನು ಏಳಿಸಲು ಯತ್ನಿಸಿದ್ದಾರೆ. ಆದರೆ ಮಲಗಿದ್ದ ಮಗ್ಗುಲಲ್ಲೇ ವೀರನ್ ಮೃತಪಟ್ಟಿರುತ್ತಾರೆ. ಈ ಸುದ್ದಿ ತಿಳಿದ ಕೂಡಲೇ ಬಸ್ ನಿರ್ವಾಹಕ ಮೃತದೇಹದ ಜೊತೆಗೆ ರಾಧಾಕೃಷ್ಣನ್ ಅವರನ್ನು ಮಾರ್ಗ ಮಧ್ಯೆ ಬಸ್‍ನಿಂದ ಇಳಿಸಿ ಹೋಗಿದ್ದಾನೆ. ಸ್ಥಳೀಯರು ಮತ್ತು ಪೊಲೀಸರು ವೀರನ್ ಮೃತದೇಹವನ್ನು ಸಾಗಿಸಲು ನೆರವು ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

bus conductor dead body ಮೃತದೇಹ ತಿರುವಣ್ಣಮಲೈ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ