ಪ್ರೇಯಸಿಗಾಗಿ ತಾಯಿ-ಪತ್ನಿ ಮೇಲೆ ಹಲ್ಲೆ

illegal relationship: man attempt to hit his own mother and wife

12-01-2018

ಬೆಂಗಳೂರು: ಪುಲಿಕೇಶಿನಗರದಲ್ಲಿ ಪ್ರೇಯಸಿ ಜೊತೆ ಸೇರಿಕೊಂಡು ಪತ್ನಿ ಹಾಗೂ ತನ್ನ ತಾಯಿಯ ಮೇಲೆ ಪತಿರಾಯನೊಬ್ಬ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಪತ್ನಿ ಸ್ನೇಹಾ ಹಾಗೂ ತಾಯಿ ನಂದಾರ ಮೇಲೆ ಹಲ್ಲೆ ಮಾಡಲು ಮುಂದಾದ ರೋಹಿತ್‍ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರು ವರ್ಷಗಳ ಹಿಂದೆ ಸ್ನೇಹಾ ಅವರನ್ನ ಮದುವೆಯಾಗಿದ್ದ ರೋಹಿತ್, ಇತ್ತೀಚಿನ ದಿನಗಳಲ್ಲಿ ಬೇರೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿ ಮತ್ತು ಹೆಂಡತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ರೋಹಿತ್ ಪ್ರೇಯಸಿ ಮಾತಿಗೆ ಮರುಳಾಗಿ ಪತ್ನಿ ಸ್ನೇಹಾಗೆ ವಿಚ್ಚೇದನ ನೀಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದಾನೆ. ಇದಕ್ಕೆ ಒಲ್ಲೆ ಎಂದಾಗ ಸಾಕಷ್ಟು ಬಾರಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ರೋಹಿತ್ ಮತ್ತವನ ಪ್ರೇಯಸಿ ಇಬ್ಬರು ಸೇರಿ ಮನೆ ಹತ್ತಿರ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಪತ್ನಿ ಸ್ನೇಹ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪುಲಿಕೇಶಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Illegal relationship attempt to murder ವಿಚ್ಚೇದನ ಪ್ರೇಯಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ