ಸಿದ್ದರಾಮಯ್ಯಗೆ ಶೆಟ್ಟರ್ ಸವಾಲ್

siddaramaiah v/s jagadish shettar

12-01-2018

ಹುಬ್ಬಳ್ಳಿ: ನಾನು ಬಿಜೆಪಿ ವಿಪಕ್ಷ ನಾಯಕ ಹಾಗು ಆರ್.ಎಸ್.ಎಸ್ ಕಾರ್ಯಕರ್ತ. ನಾವೂ ಉಗ್ರಗಾಮಿಗಳಾದರೆ, ನಮ್ಮನ್ನೂ ಬಂಧಿಸಲಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ. ನಮ್ಮನ್ನು ಬಂಧಿಸುವ ಧೈರ್ಯ ಅವರಿಗಿಲ್ಲ. ಬಿಜೆಪಿ ಪಕ್ಷದ ಸಂಘಟನೆಯನ್ನು ನೋಡಿ ಸಿಎಂ ಆತ್ಮ ಸ್ಥೈರ್ಯ ಕಳೆದುಕೊಂಡು ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ, ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದರು.

ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಲು ರಾಜ್ಯ ಸರ್ಕಾರಕ್ಕೆ ಆಗುವುದಿಲ್ಲ, ಇದರಲ್ಲೂ ಇವರು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು. ರಾಜ್ಯಕ್ಕೆ ಶಿವಸೇನೆ ಪಕ್ಷ ಆಗಮನ ಹಿನ್ನೆಲೆ, ಶಿವಸೇನೆಯಿಂದ ನಮ್ಮ ಬಿಜೆಪಿ ಪಕ್ಷದ ಮೇಲೆ ಪರಿಣಾಮ ಬಿರುವುದಿಲ್ಲ. ಈ ಹಿಂದೆ ರಾಜ್ಯದಲ್ಲಿ ಇಂತಹ ಹಲವಾರು ಪಕ್ಷಗಳು ಬಂದು ಹೋಗಿವೆ ಎಂದರು. ಇನ್ನು ಇದೇ ವೇಳೆ ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ ಹುಬ್ಬಳ್ಳಿ ನಗರದ ಉಣಕಲ್ ಕೆರೆಯಲ್ಲಿರುವ ಸ್ವಾಮಿ ವಿವೇಕಾನಂದರ ಪುತ್ಥಳಿಯ ಗೌರವ ಸಲ್ಲಿಸಿದರು.

 


ಸಂಬಂಧಿತ ಟ್ಯಾಗ್ಗಳು

jagadish shettar terrorist ಪಿಎಫ್ ಐ ಶಿವಸೇನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ