ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಹಿನ್ನೆಲೆ  ಒಬ್ಬನಿಗೆ ಚಾಕು ಇರಿತ

Kannada News

19-04-2017

ಮಂಡ್ಯ:-ಇಂಜಿನೀಯರಿಂಗ್ ಕಾಲೇಜು ಅಂತಿಮ ‌ವರ್ಷದ ಇಬ್ಬರು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು
 ಒಬ್ಬನಿಗೆ ಚಾಕು ಇರಿದು ಪರಾರಿಯಾಗಿದ್ದು ಈ ಇಬ್ಬರು ವಿದ್ಯಾರ್ಥಿಗಳು ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ನಲ್ಲಿರುವ ಆದಿ ಚುಂಚನಗಿರಿ ಇಂಜನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಘಟನೆ ನಂತರ ಯತೀಶ್ ನಾಪತ್ತೆಯಾಗಿದ್ದಾನೆ. ಕನಕಪುರ ಮೂಲದ ಆನಂದ್ ಮತ್ತು ಚಿಕ್ಕಮಗಳೂರು ಮೂಲದ ಯತೀಶ್ ಇಬ್ಬರೂ ಅಂತಿಮ ವರ್ಷದ ಇಂಜನೀಯರಿಂಗ್ ಓದುತ್ತಿದ್ದರು. ಕಾಲೇಜಿನ ಮುಂಭಾಗದಲ್ಲಿಯೇ ಮನೆ ಮಾಡಿಕೊಂಡು ಒಟ್ಟಿಗೆ ಇದ್ದರು. ರಾತ್ರಿ ಇಬ್ಬರ ನಡುವೆ ಮಾರಾಮಾರಿ ನಡೆದು ಚಾಕುವಿನಿಂದ ಇರಿದ ಯತೀಶ್ ನಾಪತ್ತೆಯಾಗಿದ್ದಾನೆ. ಗಾಯಾಳು ಆನಂದ್ ಗೆ ಆದಿಚುಂಚನ ಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಈ ಕುರಿತು ಆಸ್ಪತ್ರೆಗೆ ಭೇಟಿ ನೀಡಿ ಬೆಳ್ಳೂರು ಪೊಲೀಸರು ಪರಿಶೀಲನೆ ನಡೆಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ