‘ಬಿಜೆಪಿ ಸುಮ್ಮನಿದ್ದರೆ ಎಲ್ಲವೂ ಸರಿಹೋಗುತ್ತದೆ’12-01-2018

ಮಂಗಳೂರು: ಸಮಾಜದಲ್ಲಿ ಯಾರು ಭಯದ ವಾತಾವರಣ ನಿರ್ಮಾಣ ಮಾಡುತ್ತಾರೋ ಅದನ್ನು ಭಯೋತ್ಪಾದನೆ ಅಂತ ಕರೀತಾರೆ, ಬಿಜೆಪಿಗರ ನಡವಳಿಕೆ ಹಾಗೆಯೇ ಇದೆ ಎಂದು, ಸಂಘ ಪರಿವಾರದ ವಿರುದ್ಧ ಸಿಎಂ ಉಗ್ರವಾದ ಹೇಳಿಕೆಯನ್ನು ಗೃಹ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಹಾಗೂ ಅನಂತ್ ಕುಮಾರ್ ಹೆಗಡೆ ನೀಡಿರೋ ಹೇಳಿಕೆ ಪ್ರಚೋದನಾಕಾರಿಯಾಗಿದೆ, ಸಮಾಜದಲ್ಲಿ ಶಾಂತಿ ಕಡದೋ ಕೆಲಸ ಮಾಡುತ್ತಿದ್ದಾರೆ ಇಂತಹ ಹೇಳಿಕೆಗಳ ಹಿನ್ನೆಲೆಯಲ್ಲಿ ಸಿಎಂ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.

ಪಿಎಫ್ಐ ಹಾಗೂ ಸಂಘ ಪರಿವಾರ ಎರಡೂ ಸಂಘಟನೆಗಳು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿವೆ ಕ್ರಮ ಕೈಗೊಳ್ಳುವುದಾದರೆ ಎರಡೂ ಸಂಘಟನೆಗಳ ವಿರುದ್ಧ ಕೈಗೊಳ್ಳಬೇಕು, ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇನ್ನು ಧನ್ಯಶ್ರೀ ಆತ್ಮಹತ್ಯೆ ‌ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೇರಿದಂತೆ ಮೂವರ ಬಂಧನವಾಗಿದೆ. ಇತರೆ ಸಂದರ್ಭಗಳಲ್ಲಿ ಮಾತನಾಡುವ ಬಿಜೆಪಿಗರು ಈಗ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. ಬಿಜೆಪಿ ಹಾಗೂ ಸಂಘ ಪರಿವಾರ ಸ್ವಲ್ಪ ಸುಮ್ಮನಿರಬೇಕು ಆಗ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Ramalingareddy Sangh Parivar ತೀರ್ಮಾನ ಸಂಘಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ