ಇಸ್ರೊ ಕಿರೀಟಕ್ಕೆ ಮತ್ತೊಂದು ಗರಿ…

 ISRO Launches Its 100th Satellite

12-01-2018

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಶುಕ್ರವಾರ ಬೆಳಗ್ಗೆ ತನ್ನ 100ನೇ ಉಪಗ್ರಹ ಕಾರ್ಟೊಸ್ಯಾಟ್-2ನ್ನು ಅಂತರಿಕ್ಷಕ್ಕೆ ಹಾರಿ ಬಿಟ್ಟಿದೆ. ಆಂಧ್ರಪ್ರದೇಶದ ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ಪೊಲಾರ್ ಸೆಟಲೈಟ್ ಲಾಂಚ್ ವೆಹಿಕಲ್ PSLV-C40 ರಾಕೆಟ್ ಮೂಲಕ, ಭಾರತದ ಕಾರ್ಟೊಸ್ಯಾಟ್ ಮತ್ತು ಅಮೆರಿಕ ಹಾಗೂ ಇತರೆ 5 ದೇಶಗಳಿಗೆ ಸೇರಿದ ಒಟ್ಟು 31 ಉಪಗ್ರಹಗಳು ಯಶಸ್ವಿಯಾಗಿ ನಭೋಮಂಡಲ ಸೇರಿವೆ.

ಇಸ್ರೊದ ಪಿಎಸ್‌ಎಲ್‌ವಿ ರಾಕೆಟ್ 320 ಟನ್ ತೂಕವಿದ್ದು ಸುಮಾರು 44.4 ಮೀಟರ್ ಅಂದರೆ 15 ಅಂತಸ್ತುಗಳ ಕಟ್ಟಡದಷ್ಟು ಎತ್ತರವಿರುತ್ತದೆ. ಭೂಮಿಯಿಂದ 550 ಕಿಲೋಮೀಟರ್ ಎತ್ತರದಲ್ಲಿ 30 ಉಪಗ್ರಹಗಳು ಮತ್ತು 359 ಕಿ.ಮೀ ದೂರದಲ್ಲಿ ಒಂದು ಉಪಗ್ರಹವನ್ನು ವಿಭಿನ್ನ ಕಕ್ಷೆ ಸೇರುವಂತೆ ಉಡಾವಣೆ ಮಾಡಿರುವುದು ಈ ಬಾರಿಯ ವೈಶಿಷ್ಟ್ಯ ಎಂದು ಇಸ್ರೊ ವಿಜ್ಞಾನಿಗಳು ಹೇಳಿದ್ದಾರೆ.

ಸುಮಾರು 700 ಕೆಜಿ ತೂಕವಿರುವ ಭಾರತದ ಕಾರ್ಟೊಸ್ಯಾಟ್ -2, ದೂರಸಂವೇದಿ ಉಪಗ್ರಹವಾಗಿದ್ದು, ಎರಡು ಅಡಿಯಷ್ಟು ಅಗಲ ಇರುವ ವಸ್ತುಗಳನ್ನೂ ಗುರುತಿಸುವಂಥ ಸಾಮರ್ಥ್ಯ ಹೊಂದಿದೆ. ಸಾರ್ವಜನಿಕ ವಲಯದಲ್ಲಿರುವ ಇಸ್ರೊದಂಥ ಸಂಸ್ಥೆಗಳು, ತಮ್ಮ ಅದ್ಭುತ ಸಾಧನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿವೆ. ಇದೇ ರೀತಿ ರಕ್ಷಣಾ ಕ್ಷೇತ್ರದಲ್ಲೂ ಭಾರತ ಸ್ವಾವಲಂಬನೆ ಸಾಧಿಸುವಂತಾದರೆ, ಭಾರತೀಯರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.


ಸಂಬಂಧಿತ ಟ್ಯಾಗ್ಗಳು

Isro cartosat 2 ಅಂತಾರಾಷ್ಟ್ರೀಯ ಭಾರತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ