ಅಂಬಿ ಅಭಿಮಾನಿಗಳ ಫೇಸ್ ಬುಕ್ ಸಮರ

Ambi fans Outrage on Zilla panchayath member

12-01-2018

ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ವಿರುದ್ಧ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಅವಹೇಳನಕಾರಿ ಹೇಳಿಕೆ ನೀಡಿ, ಅಂಬರೀಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಡ್ಯ ಜಿಲ್ಲೆಯ ಬೂದನೂರು ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್, ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಅಂಬೀಶ್ ಅವರನ್ನು ನಾಮಾರ್ಧ ಎಂದು ಹೇಳಿದ್ದರು. ಇದರಿಂದ ಸಿಡಿದೆದ್ದ ಅಂಬರೀಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣ ಫೇಸ್ ಬುಕ್ನಲ್ಲಿ ಯೋಗೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ಫೇಸ್ ಬುಕ್ನಲ್ಲೇ ಅವಹೇಳನಕಾರಿ ಪೋಸ್ಟ್ ಮಾಡಿ ತಮ್ಮ ಕೋಪ ಬಹಿರಂಗಪಡಿಸಿದ್ದಾರೆ. ಅಂಬಿಸೇನಾ ಸಮಿತಿ ಹೆಸರಲ್ಲಿ ಫೇಸ್ ಬುಕ್ ಸಮರಕ್ಕೆ ಮುಂದಾಗಿರೋ ಅಂಬರೀಶ್ ಅಭಿಮಾನಿಗಳು ಯೋಗೇಶ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಹೇಳಿಕೆಗೆ ಕ್ಷಮೆ ಕೇಳಿದರೂ, ಅಂಬಿ ಅಭಿಮಾನಿಗಳ ಆಕ್ರೋಶ ಮಾತ್ರ ನಿಂತಿಲ್ಲ.


ಸಂಬಂಧಿತ ಟ್ಯಾಗ್ಗಳು

Ambareesh Zilla panchayath ಅವಹೇಳನ ಅಭಿಮಾನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ