ನೀರಲ್ಲಿ ಮುಳುಗಿ ಪೊಲೀಸ್ ಪೇದೆ ಸಾವು

police constable died in temple pond

11-01-2018

ಮಂಡ್ಯ: ದೇವಸ್ಥಾನದ ಕೊಳದಲ್ಲಿ ಮುಳುಗಿ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆಯು ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಮಳವಳ್ಳಿಯ ಮತ್ತಿತಾಳೇಶ್ವರ ದೇವಾಲಯದ ಕೊಳದಲ್ಲಿ ಈ ದುರ್ಘಟನೆ ನಡೆದಿದೆ. ಚಂದ್ರಶೇಖರ(30) ಮೃತ ಪೇದೆ. ಕುಟುಂಬಸ್ಥರ ಜೊತೆ ದೇವಸ್ಥಾನಕ್ಕೆ ಆಗಮಿಸಿದ್ದ ಚಂದ್ರಶೇಖರ್, ಸ್ನಾನ ಮಾಡಲು ದೇವಾಲಯದ ಕೊಳಕ್ಕೆ ಇಳಿದ್ದಾರೆ. ಈ ವೇಳೆ ಕಾಲು ಜಾರಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

constable pond ದೇವಸ್ಥಾನ ಮಳವಳ್ಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ