ಬಿಯರ್ ಬಾಟಲ್ ನಿಂದ ಯುವಕನಿಗೆ ಹಲ್ಲೆ

The young man was beaten with beer bottle: chikkaballapura

11-01-2018

ಚಿಕ್ಕಬಳ್ಳಾಪುರ: ಹಾಡಹಗಲೇ ಯುವಕನಿಗೆ ಥಳಿಸಿ ದರೋಡೆ ಮಾಡಿರುವ ಘಟನೆಯು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ನಗರದ ಸಿಟಿಜನ್ ಕ್ಲಬ್ ನಲ್ಲಿ ಯುವಕನ ಮೇಲೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ಬಿಯರ್ ಬಾಟಲ್ ನಿಂದ ತಲೆಗೆ ಒಡೆದು ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಗೌರಿಬಿದನೂರು ತಾಲ್ಲೂಕು ನಗರಗರೆಯ ನಾಗರಾಜ್ ಹಲ್ಲೆಗೊಳಗಾದ ಯುವಕ. ತನ್ನ ಸ್ನೇಹಿತನನ್ನು ನೋಡಲು ಜಿಲ್ಲಾ ಕೇಂದ್ರ ಮಹಿಳಾ ಕಾಲೇಜಿನ ಅವರಣಕ್ಕೆ ಬಂದಿದ್ದು, ಈ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ದರೋಡೆಕೋರರಿಂದ ಏಟು ತಿಂದು, ರಕ್ತ ಸುರಿಸಿಕೊಂಡು ಓಡಿ ಬಂದು ರಸ್ತೆಯಲ್ಲಿ ಚೀರಾಡುತ್ತಿದ್ದ ವೇಳೆ , ಇನ್ನು ಅದೇ ಮಾರ್ಗವಾಗಿ ಸಾಗುತ್ತಿದ್ದ ಪೊಲೀಸರು ತಕ್ಷಣವೇ ಗಾಯಾಳು ನಾಗರಾಜ್ನನ್ನು ಅಸ್ಪತ್ರಗೆ ದಾಖಲಿಸಿದ್ದಾರೆ. ಇನ್ನು ಈ ಕುರಿತಂತೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಹುಡುಕಾಟ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Attack beer bottle ಹಾಡಹಗಲೇ ದರೋಡೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ