ಹೆದ್ದಾರಿಗಾಗಿ ಮರಗಳ ಮಾರಣ ಹೋಮ

trees cutting in the name of development

11-01-2018

ಶಿವಮೊಗ್ಗ: ಶಿವಮೊಗ್ಗದ ಭದ್ರಾವತಿ ನಗರದ ಲೋಯರ್ ಹುತ್ತಾ ಬಿ.ಎಚ್.ರಸ್ತೆಯ ಹೆದ್ದಾರಿಯಲ್ಲಿ ಸುಮಾರು 80 ರಿಂದ 100 ವರ್ಷಗಳ ಹಳೆಯ ಭಾರಿ ಗಾತ್ರದ ಮರಗಳನ್ನು ರಸ್ತೆ ಅಭಿವೃದ್ದಿ ಹೆಸರಲ್ಲಿ ಮಾರಣ ಹೋಮ ಮಾಡಲಾಗುತ್ತಿದೆ.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಿಸರ ಉಳಿವಿಗಾಗಿ ಕೋಟ್ಯಾಂತರ ರೂಗಳನ್ನು ವ್ಯಯಮಾಡಿ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾಗಬೇಕೆಂದು ಹೇಳುತ್ತಿದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆ ಹಾಗು ಲೋಕೋಪಯೋಗಿ ಇಲಾಖೆಗಳು ವಾಹನ ದಟ್ಟಣೆ, ಸುರಕ್ಷತೆ ಹಾಗು ಸುಗಮ ಸಂಚಾರಕ್ಕಾಗಿ ರಸ್ತೆಯ ಎರಡು ಬದಿಗಳಲ್ಲಿ ಬೆಳೆದು ನಿಂತಿರುವ ಸುಮಾರು 80 ರಿಂದ 100 ವರ್ಷಗಳ ಹಳೆಯ ಭಾರಿ ಪ್ರಮಾಣದ ಮರಗಳನ್ನು ಕಡಿದು ಹಾಕುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ರಸ್ತೆ ಅಭಿವೃದ್ದಿ ಹೆಸರಲ್ಲಿ ಮರಗಳಿಗೆ ಕೊಡಲಿ ಏಟು ಸಲ್ಲದು. ಅರಣ್ಯ ಇಲಾಖೆ ಮರ ಕಡಿಯಲು ಅವಕಾಶ ಕೊಟ್ಟು ಪುನಃ ಸಸಿಗಳನ್ನು ನೆಟ್ಟು ಪೋಷಿಸುವುದರಲ್ಲಿ ವಿಫಲವಾಗಿದೆ. ಸಸಿಗಳನ್ನು ನೆಡುವುದು ಬಿಟ್ಟರೆ ಅದನ್ನು ಕಾಪಾಡುವುದು ಇಲಾಖೆ ಮರೆಯುತ್ತಿದೆ. ಈಗಾಗಲೇ ಐಟಿಐ ಬಳಿ ಮರಗಳನ್ನು ಕಡಿಯಲಾಗಿದೆ. ಪ್ರಸ್ತುತ ನಡೆಯುತ್ತಿರುವ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಬಿಳಕಿ ಕ್ರಾಸ್ ವರೆಗೆ ಇನ್ನು ಭಾರಿ ಗಾತ್ರದ 14 ಮರಗಳ ಮಾರಣ ಹೋಮ ನಡೆಯುತ್ತಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Highway tree cutting development ಮಾರಣ ಹೋಮ ಪರಿಸರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ