‘ಕಿಡಿಗೇಡಿಗಳ ಕೃತ್ಯ ಕಸದ ರಾಶಿಗೆ ಬೆಂಕಿ’

Huge fire on garbage:bengaluru

11-01-2018

ಬೆಂಗಳೂರು: ಹಲಸೂರು ಕೆರೆ ಸಮೀಪದ ಬಿಬಿಎಂಪಿ ಒಣ ಮತ್ತು ಹಸಿ ತ್ಯಾಜ್ಯ ಕ್ರೋಡಿಕೃತ ಕೇಂದ್ರದ ಬಳಿ ಕಿಡಿಗೇಡಿಗಳು ಕಸದ ರಾಶಿಗೆ ಬೆಂಕಿ ಹಚ್ಚಿದ್ದು, ಬೆಂಕಿಯನ್ನು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಅನಾಹುತ ಉಂಟಾಗುವುದು ತಪ್ಪಿದಂತಾಗಿದೆ.

ಬೆಂಕಿ ತನ್ನ ಕೆನ್ನಾಲಿಗೆ ಚಾಚಿದ್ದು ಧಗ ಧಗನೇ ಹೊತ್ತಿ ಉರಿದಿದೆ. ಇದರ ಸಮೀಪದಲ್ಲೆ ಜನವಸತಿ ಪ್ರದೇಶ ಹಾಗೂ ಪಿ.ಓ.ಪಿ ಗಣೇಶ ಮೂರ್ತಿಗಳನ್ನು ತಯಾರಕ ಘಟಕವಿದ್ದು ಬೆಂಕಿ ವ್ಯಾಪಿಸುವ ಸಾಧ್ಯತೆ ಇತ್ತು. ಬೆಂಕಿ ವ್ಯಾಪಿಸುತ್ತಿದ್ದನ್ನು ಕಂಡ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುಲಿಕೇಶಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

garbage fire ಕೆನ್ನಾಲಿಗೆ ಕಸದ ರಾಶಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ