ಇನ್ನು ಮುಂದೆ ವೇತನ ಆಯೋಗ ರಚನೆ ಇಲ್ಲ..

7th CPC could be the last pay commission

11-01-2018

ಇನ್ನು ಮುಂದೆ ಯಾವುದೇ ವೇತನ ಆಯೋಗ ರಚನೆ ಇಲ್ಲ. 7ನೇ ವೇತನ ಆಯೋಗವೇ ಕೊನೆಯದು ಎಂದು ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಹೇಳಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರು ಗಾಬರಿ ಆಗಬೇಕಾದದ್ದೇನೂ ಇಲ್ಲ. ಏಕೆಂದರೆ, ಇನ್ನು ಮುಂದೆ ಪ್ರತಿ ವರ್ಷವೂ ವೇತನ ಹೆಚ್ಚಳ ಇರುತ್ತದೆ. ವೇತನ ಏರಿಕೆ ವಿಚಾರದಲ್ಲಿ 10 ವರ್ಷಗಳ ಕಾಲ ಕಾಯ್ದು, ಬಳಿಕ ಹೊಸ ವೇತನ ಆಯೋಗ ರಚನೆ ಮಾಡಿ, ಅದರ ಶಿಫಾರಸುಗಳ ಬಗ್ಗೆ ಪರಿಶೀಲನೆ ನಡೆಸಿ, ಅಂತಿಮವಾಗಿ ವೇತನ ಏರಿಕೆ ಮಾಡುವುದು ಇಲ್ಲಿಯವರೆಗೆ ಕೇಂದ್ರ ಸರ್ಕಾರ ಪಾಲಿಸಿಕೊಂಡು ಬಂದ ಪದ್ಧತಿ. ಆದರೆ, ಈ ರೀತಿ ಆಯೋಗ ರಚನೆ ಕೈಬಿಟ್ಟು, ವಾರ್ಷಿಕವಾಗಿ ಸಂಬಳ ಹೆಚ್ಚಳ ಮಾಡುವುದೇ ಸರಿಯಾದ ಪದ್ಧತಿ ಎಂದು 7ನೇ ವೇತನ ಆಯೋಗ ಸರ್ಕಾರಕ್ಕೆ ಸಲಹೆ ನೀಡಿತ್ತು, ಸಾಮಾನ್ಯ ಮನುಷ್ಯನೊಬ್ಬನಿಗೆ ಅತ್ಯಗತ್ಯವಾಗಿ ಬೇಕಾಗಿರುವ ವಸ್ತುಗಳ ಬೆಲೆ ಏರಿಕೆ ಆಧರಿಸಿ, ಪ್ರತಿವರ್ಷವೂ ಸಂಬಳದಲ್ಲಿ ಏರಿಕೆ ಮಾಡಬೇಕು ಅನ್ನುವುದು ವೇತನ ಆಯೋಗದ ಸಲಹೆ. ಈ ನಡುವೆ, ಕೇಂದ್ರ ಸರ್ಕಾರದ ನೌಕರರು ವೇತನ ಏರಿಕೆಗಾಗಿ ಇನ್ನೂ ಕಾಯುತ್ತಲೇ ಇದ್ದಾರೆ. 7ನೇ ವೇತನ ಆಯೋಗವು ನೌಕರರ ಮೂಲವೇತನದಲ್ಲಿ ಶೇ14.27ರಷ್ಟು ಏರಿಕೆ ಶಿಫಾರಸ್ಸು ಮಾಡಿದ್ದು, ಕನಿಷ್ಟ ವೇತನವನ್ನು 7 ಸಾವಿರದಿಂದ 18 ಸಾವಿರ ರೂಪಾಯಿಗಳಿಗೆ ಏರಿಸುವಂತೆ ಹೇಳಿದೆ. ಆದರೆ, ಕೇಂದ್ರ ಸರ್ಕಾರಿ ನೌಕರರು ಕನಿಷ್ಟ ವೇತನವನ್ನು 26 ಸಾವಿರ ರೂಪಾಯಿಗಳಿಗೆ ಏರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ