ಡೆತ್ ನೋಟ್ ಬರೆದು ಮಹಿಳೆ ಆತ್ಮಹತ್ಯೆ

women suicide in apartment

11-01-2018

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ನಿನ್ನೆ ರಾತ್ರಿ ಮಹಿಳೆಯೊಬ್ಬರು ಅತ್ತೆ ಮಾವ ಗಂಡನ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ರಾಜರಾಜೇಶ್ವರಿ ನಗರದ ಟೆಂಪಲ್ ಬೆಲ್ಸ್ ಪ್ರೀಮಿಯರ್ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದ ನಿರ್ಮಲಾ(24)ಎಂದು ಗುರುತಿಸಲಾಗಿದೆ. ಒಂದೂವರೆ ವರ್ಷದ ಹಿಂದಷ್ಟೇ ಮೈಸೂರು ಮೂಲದ ನಿರ್ಮಲಾ ರಾಜರಾಜೇಶ್ವರಿನಗರದ ಜಪಾನ್‍ನ ಖಾಸಗಿ ಕಂಪನಿ ಉದ್ಯೋಗಿ ವಿಶ್ವನಾಥ್ ನನ್ನು ಮದುವೆಯಾಗಿದ್ದರು. ಜಪಾನ್‍ನಲ್ಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ. ನಗರಕ್ಕೆ ಬಂದು ಕೆಲದಿನಗಳ ಕಾಲವಿದ್ದ ವಿಶ್ವನಾಥ್ ಎರಡು ದಿನಗಳ ಹಿಂದಷ್ಟೇ ಮರಳಿ ವಾಪಸ್ ಜಪಾನ್ ಗೆ ಹೋಗಿದ್ದನು ಎಂದು ತಿಳಿದುಬಂದಿದೆ.

ಮೃತ ನಿರ್ಮಲ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್‍ನೋಟ್‍ನಲ್ಲಿ ತನ್ನ ಸಾವಿಗೆ ಪತಿ ವಿಶ್ವನಾಥ್, ಅತ್ತೆ ಪ್ರೇಮ, ಮಾವ ನಾಗರಾಜ್ ಕಿರುಕುಳವೇ ಕಾರಣ ಎಂದು ತಿಳಿಸಿದ್ದಾರೆ. ಆದರೆ ಪ್ರಕರಣ ದಾಖಲಿಸಲು ಪೊಲೀಸರು ಬರುವ ಮುನ್ನವೇ ಸಾಕ್ಷಿ ನಾಶಕ್ಕೆ ಪ್ರಯತ್ನ ಪಟ್ಟಿದ್ದು ಡೆತ್ ನೋಟ್ ಹರಿದು ಕಸದ ಬುಟ್ಟಿಗೆ ಎಸೆಯಲಾಗಿದೆ. ಪೊಲೀಸರ ತಪಾಸಣೆ ವೇಳೆ ಹರಿದ ಡೆತ್ ನೋಟ್ ಪತ್ತೆಯಾಗಿದ್ದು ಅವನ್ನೆಲ್ಲಾ ಸರಿಯಾಗಿ ಜೋಡಿಸಿರುವ ರಾಜರಾಜೇಶ್ವರಿನಗರ ಪೊಲೀಸರು ಅತ್ತೆ ಪ್ರೇಮ ಮತ್ತು ಮಾವ ನಾಗರಾಜ್ ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Suicide Police ಕಿರುಕುಳ ಡೆತ್‍ ನೋಟ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ