ತಪ್ಪಿತು ರೈಲು ಅಪಘಾತ...

train hits platform in kalaburagi

11-01-2018

ಕಲಬುರುಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿಪಟ್ಟದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಎಂಜಿನ್ ಪ್ಲಾಟ್ ಫಾರ್ಮ್ ಗೋಡೆಗೆ ತಗುಲಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಕಲಬುರ್ಗಿಯಿಂದ‌ ವಾಡಿ ಮಾರ್ಗವಾಗಿ ಗುಂತಕಲ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಪ್ಲಾಟ್ ಫಾರ್ಮ ಗೋಡೆಗೆ ತಗುಲಿದೆ. ಹೀಗಾಗಿ ಗೋಡೆ ಕಲ್ಲುಗಳು‌ ಹಳಿ ಮೇಲೆ ಬಂದು ಬಿದ್ದಿವೆ‌ ಜೊತೆಗೆ ದೊಡ್ಡ ಸದ್ದು ಕೂಡಾ ಬಂದಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಗೊಂಡು ಬೋಗಿಯಿಂದ ಜಿಗಿದಿದ್ದಾರೆ. ಪ್ಲಾಟ್ ಫಾರ್ಮ ಗೋಡೆಯ ಹೊರಚಾಚಿಕೊಂಡಿದ್ದ ಕಲ್ಲು ಎಂಜಿನ್ ಗೆ ತಗುಲಿ ಅವಘಡ ನಡೆದಿದೆ. ವಾಡಿ ರೈಲ್ವೆ ನಿಲ್ದಾಣದ ಫ್ಲಾಟ್ ಪಾರ್ಮ್ ಹಳೆಯದಾಗಿದ್ದು, ಹೊಸ ಮಾದರಿಯ ರೈಲು ಎಂಜಿನ್ ಬಂದಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆ ನಂತರ ಪ್ಲಾಟ್ ಫಾರ್ಮ್ ಸರಿಗೊಳಿಸಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

railway platform ಪ್ರಯಾಣಿಕ ಪ್ಯಾಸೆಂಜರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ