'ರಾಜ್ಯಕ್ಕೆ ಯಾರೇ ಬರಲಿ ಸಿದ್ದು ಮುಂದಿನ ಸಿಎಂ’11-01-2018

ಬಾಗಲಕೋಟೆ: ರಾಜ್ಯಕ್ಕೆ ಮೋದಿಯೇ ಬರಲಿ, ಅಮಿತ್ ಷಾ ಬರಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ-ಅಮಿತ್ ಷಾ ಇವರಿಬ್ಬರು ಏನೇ ಪ್ರಚೋದನೆ ಮಾಡಿದರೂ, ಏನು ಮಾಡೋಕಾಗಲ್ಲ. ಜನರನ್ನು ಕೆರಳಿಸುವಂತಹದ್ದು ಅಥವ ವಾಮಮಾಗ೯ದ ಮೂಲಕ ಮುಂದಾದರೂ ರಾಜ್ಯದಲ್ಲಿ ಬದ ಬದಲಾವಣೆ ಅಸಾಧ್ಯ, ರಾಜ್ಯದ ಜನರು ಕಾಂಗ್ರೆಸ್ ಪರವಾಗಿದ್ದಾರೆ ಎಂದರು. ರಾಜ್ಯದಲ್ಲಿ ಜನರಿಗೆ ನೀಡಿದ ಜನಪರ ಕಾಯ೯ಗಳೇ ನಮ್ಮ ಕೈ ಹಿಡಿಯಲಿವೆ ಎಂದಿದ್ದು, ಇದೇ ವೇಳೆ ಸದಾಶಿವ ಆಯೋಗ ವರದಿ ವಿಚಾರವಾಗಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇದೇ ತಿಂಗಳ 14ರಂದು, ಸಭೆ ಕರೆಯಲಾಗಿದೆ. ಸಭೆಯಲ್ಲಿ ಚಚಿ೯ಸಿ ಸಿಎಂ ಅಂತಿಮ ನಿಧಾ೯ರ ತೆಗೆದುಕೊಳ್ಳಲಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

H.Anjaneya Narendra modi ಅಮಿತ್ ಷಾ ಪ್ರಚೋದನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ