ಗಂಗಾ ಸ್ವಚ್ಛಗೊಳಿಸಲು ಆಮೆಗಳ ಪಡೆ…

500 Turtles To Clean Parts Of Holy River Ganga

10-01-2018

ಪವಿತ್ರ ಗಂಗಾ ನದಿ ಸ್ವಚ್ಛಗೊಳಿಸಲು ನರೇಂದ್ರ ಮೋದಿ ಸರ್ಕಾರ ನಮಾಮಿ ಗಂಗೆ ಯೋಜನೆಯನ್ನೇನೋ ರೂಪಿಸಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಸುಮಾರು 2,500 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದರೂ ಕೂಡ, ಉಪಯೋಗವೇ ಆಗದೆ ಕೊಳೆಯುತ್ತಾ ಬಿದ್ದಿದೆ. ಇಂಥ ಪರಿಸ್ಥಿತಿಯಲ್ಲಿ ಗಂಗಾ ನದಿ ಸ್ವಚ್ಛಗೊಳಿಸಲು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಒಂದು ವಿಚಿತ್ರ ಯೋಜನೆ ರೂಪಿಸಿದೆ. ಗಂಗಾ ನದಿಯ ಹಲವು ಕಡೆಗಳಲ್ಲಿ 500 ಆಮೆಗಳ ಪಡೆಯನ್ನು ನೀರಿಗಿಳಿಸಲಿದೆಯಂತೆ. ಮಾಂಸಾಹಾರಿಯಾಗಿರುವ ಈ ಆಮೆಗಳು, ಅರ್ಧಂಬರ್ಧ ಸುಟ್ಟ ಶವಗಳು ಮತ್ತು ಸತ್ತ ಪ್ರಾಣಿಗಳ ದೇಹವನ್ನು ಆಹಾರವಾಗಿ ಮಾಡಿಕೊಳ್ಳುತ್ತವಂತೆ. ಈ ಮೂಲಕ ಪ್ರಾಕೃತಿಕವಾಗಿ ಗಂಗಾ ನದಿಯನ್ನು ಸ್ವಚ್ಛಗೊಳಿಸಬಹುದು ಅನ್ನುವುದು ಯೋಗಿ ಸರ್ಕಾರದ ಚಿಂತನೆಯಂತೆ. ಆದರೆ, ಈ ಹಿಂದೆಯೂ ಇಂಥ ಹಲವಾರು ಪ್ರಯತ್ನಗಳು ನಡೆದಿದ್ದವಾದರೂ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ ಅನ್ನುವುದು ಮಾತ್ರ ನಿಜ. ಒಟ್ಟಿನಲ್ಲಿ, ಗಂಗಾ ನದಿಗೆ ಚರಂಡಿ ನೀರು, ಕಾರ್ಖಾನೆಗಳ ತ್ಯಾಜ್ಯ, ಪ್ಲಾಸ್ಟಿಕ್ ಬಾಟಲಿಗಳು ಸೇರುವುದನ್ನು ತಪ್ಪಿಸದೆ, ಮನುಷ್ಯರು ಮತ್ತು ಪ್ರಾಣಿಗಳ ಶವವನ್ನು ಗಂಗಾ ನದಿಗೆ ಎಸೆಯುವುದನ್ನು ತಪ್ಪಿಸದೆ, ಆಮೆ ಬಿಡುತ್ತೇವೆ, ಮೀನು ಬಿಡುತ್ತೇವೆ ಎಂಬಂಥ ಹಾಸ್ಯಾಸ್ಪದ ಕ್ರಮಗಳನ್ನು ಕೈಗೊಳ್ಳುವುದರಿಂದ ಯಾವುದೇ ಲಾಭ ಆಗುವುದಿಲ್ಲ ಅನ್ನುವುದನ್ನು ಉತ್ತರ ಪ್ರದೇಶ ಸರ್ಕಾರ ಅರ್ಥಮಾಡಿಕೊಳ್ಳಬೇಕು.


ಸಂಬಂಧಿತ ಟ್ಯಾಗ್ಗಳು

Turtles River Ganga ನರೇಂದ್ರ ಮೋದಿ ಹಾಸ್ಯಾಸ್ಪದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


All the best
  • M. Umesh
  • Ms Fabrication