ಬಂಟ್ವಾಳದಲ್ಲೂ ನೈತಿಕ ಪೊಲೀಸ್ ಗಿರಿ

Bantwal: young women threatened by 4 men

10-01-2018

ದಕ್ಷಿಣ ಕನ್ನಡ: ಕರಾವಳಿ ಭಾಗದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿನ ಯುವತಿಯೊಬ್ಬರಿಗೆ ಬೆದರಿಕೆ ಹಾಕಲು ಮನೆಗೆ ನುಗ್ಗಿದ್ದ ನಾಲ್ವರು ದಾಂದಲೆ ನಡೆಸಿದ್ದಾರೆ. ಏಕಾ ಏಕಿ ಯುವತಿಯ ಮನೆಗೆ ನುಗ್ಗಿದ ಇವರು ಅನ್ಯಕೋಮಿನ ಯುವಕರ ಜೊತೆ ಮಾತನಾಡಬಾರದು, ಹಾಗೇನಾದರು ಮಾಡಿದರೆ ಊರಿಂದ ಹೊರಗಡೆ ಹಾಕ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಯುವತಿ ಹಾಗೂ ಆಕೆಯ ತಾಯಿಯನ್ನು ತಳ್ಳಾಡಿ ರಂಪಾಟ ಮಾಡಿದ್ದಾರೆ.

ಇದನ್ನು ತಡೆಯಲು ಬಂದ ಮನೆ ಸದಸ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅನ್ಯಕೋಮಿನ ಯುವಕರೊಂದಿಗೆ ಇನ್ನು ಮಾತನಾಡಿದರೆ ಹುಷಾರ್ ಎಂದು ಅವಾಜ್ ಹಾಕಿದ್ದಾರೆ. ಇನ್ನು ಘಟನೆ ಸಂಬಂಧ ಆಟೋ ಚಾಲಕ ಉಮೇಶ್, ಹೋಟೆಲ್ ಮಾಲೀಕ ರಮೇಶ್ ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಉಮೇಶನ ತಮ್ಮ ರಾಜೇಶ್ ಮತ್ತು ಇನ್ನೊಬ್ಬ ಪರಾರಿಯಾಗಿದ್ದಾರೆ. ಪರಾರಿಯಾದವರಿಗಾಗಿ ಬಲೆ ಬೀಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

police giri bantwal ಹುಷಾರ್ ರಂಪಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ