ಪೀಠ ತ್ಯಾಗ ನಿರಾಕರಿಸಿ ಮೌನವ್ರತ

kalmutt swamiji refused to quit peetha

10-01-2018

ಕೊಪ್ಪಳ: ಮಹಿಳೆಯೊಂದಿಗಿನ ರಾಸಲೀಲೆ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿ ಮತ್ತೆ ಮಠಕ್ಕೆ ಹಿಂತಿರುಗಿದ್ದ ಕೊಪ್ಪಳದ ಗಂಗಾವತಿಯ ಕಲ್ಮಠದ ಕೊಟ್ಟೂರು ಸ್ವಾಮೀಜಿ ಪೀಠ ತ್ಯಾಗಕ್ಕೆ ನಿರಾಕರಿಸಿ ಮೌನವ್ರತದ ಮೊರೆ ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವೀರಶೈವ ಲಿಂಗಾಯತ ಸಮಾಜದ ಮುಖಂಡರು ಕೊಟ್ಟೂರು ಸ್ವಾಮೀಜಿ  ಪೀಠತ್ಯಾಗಕ್ಕೆ ಒತ್ತಾಯಿಸಿ ಈಗಾಗಲೆ ಜನವರಿ 5ರವರೆಗೆ ಗಡುವು ನೀಡಿದ್ದರು. ಆದರೆ ಸ್ವಾಮೀಜಿ ಇದಕ್ಕೆ ಸೊಪ್ಪು ಹಾಕದೇ ಮೌನ ವ್ರತಕ್ಕೆ ಶರಣಾಗಿದ್ದಾರೆ. ಸ್ವಾಮೀಜಿಯ ವರ್ತನೆಯನ್ನು ಖಂಡಿಸಿ ಮತ್ತೆ ಸಮಾಜದ ಸಭೆ ನಡೆಸಿದ ಮುಖಂಡರು 22ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಇದಕ್ಕೆ ಪ್ರತಿತಂತ್ರವಾಗಿ ಸ್ವಾಮೀಜಿ, ಮಠದಲ್ಲಿ ಮೌನನುಷ್ಠಾನ ವ್ರತಾಚರಣೆ ಹಿಡಿಯುವ ಮೂಲಕ ಸಮಾಜದ ಮುಖಂಡರಿಗೆ ಎದುರೇಟು ನೀಡಲು ಮುಂದಾಗಿದ್ದಾರೆ. ಒಂದು ತಿಂಗಳು ಮೌನವ್ರತದಲ್ಲಿ ಸ್ವಾಮೀಜಿ ಇರಲಿದ್ದಾರೆ ಎಂದು ಮಠದ ಭಕ್ತರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gangavathi kottureshwara ಕಲ್ಮಠ ಸ್ವಾಮೀಜಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ