'ತಪ್ಪು‌ಮಾಡಿದವರನ್ನು ಯಾರೂ ಬೆಂಬಲಿಸಲ್ಲ’10-01-2018

ಮಂಗಳೂರು: ಮಂಗಳೂರಿನಲ್ಲಾಗುತ್ತಿರುವ ಘಟನೆಗಳ ಬಗ್ಗೆ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿ, ಎಲ್ಲಾ ಕೋಮಿನವರು ನಮ್ಮ ಸೋದರರಿದ್ದಂತೆ, ಕೋಮುಗಲಭೆ ಉದ್ದೇಶದಿಂದ ಮಾಡಿದ್ದಾರಾ, ವೈಯಕ್ತಿಕ ದ್ವೇಷದಿಂದ ಮಾಡಿದ್ದಾರಾ ಅಥವ ಸುಪಾರಿ ಪಡೆದು ಹತ್ಯೆ ಮಾಡಿದ್ದಾರ ಅನ್ನೊದು ತನಿಖೆ ಆಗಬೇಕು ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ತನಿಖೆ ಸರಿಯಾಗಿ‌ ಮಾಡಿಲ್ಲ ಅಂದರೆ ಆಗ ಪ್ರತಿಭಟನೆ ಮಾಡಬೇಕು, ಪೋಸ್ಟ್ ಮಾರ್ಟಮ್ ಮಾಡಲು ಬಿಡಲ್ಲ, ಬಾಡಿಯನ್ನು ಮನೆಗೆ ಸಹ ಮುಟ್ಟಲು‌ ಬಿಡದೇ ರಾಜಕೀಯ ಮಾಡ್ತಾರೆ, ಬಿಜೆಪಿಯವರು ಸಮಾಜವನ್ನು ಇಬ್ಬಾಗ ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು, ಪೊಲೀಸ್ ಇಲಾಖೆಗೆ ಮೊದಲು ಸಹಕಾರ ಕೊಡಬೇಕು ಎಂದಿದ್ದಾರೆ.

ಮೃತರ ಮನೆಯವರು ಪಾಪ‌ ಮನೆಯಲ್ಲಿರುತ್ತಾರೆ, ಅದರೆ ಅದೇ ವಿಚಾರವಾಗಿ ಕೇಲವರು ರಾಜಕೀಯ ಮಾಡುತ್ತಿದ್ದಾರೆ, ನನ್ನ ವೈರಿ ನನ್ನ ಜೊತೆಗೆ ಊಟ ಮಾಡಲು ಕೂತಾಗ ಹೊರ ಹೋಗು ಎಂದು ಹೇಳೊ ಮನುಷ್ಯ ನಾನಲ್ಲ. ನಾನು‌ ಶಾಸಕನಾಗುವ ಮೊದಲಿನಿಂದಲೂ ನನ್ನ ವಿರುದ್ದ ಆರೋಪ ಮಾಡುತ್ತಲೇ ಬಂದಿದ್ದಾರೆ. ಕ್ಷೇತ್ರದ ಜನರ ದಿಕ್ಕುತಪ್ಪಿಸುವ ಕೆಲಸ‌ವನ್ನ ಕೆಲವರು ಮಾಡುತ್ತಿದ್ದಾರೆ, ಆದರೆ ಇದ್ಯಾವುದೂ‌ ನಡೆಯಲ್ಲ ಎಂದರು. ತಪ್ಪು‌ಮಾಡಿದವರಿಗೆ ಯಾರೂ ಸಪೋರ್ಟ್ ಮಾಡಲ್ಲ, ಸುಖಾ ಸುಮ್ಮನೆ ಈಗ ಯಾವುದೋ ಪೋಟೊ ವೈರಲ್ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.


ಸಂಬಂಧಿತ ಟ್ಯಾಗ್ಗಳು

U.T Khadar politics ಇಲಾಖೆ ಕ್ಷೇತ್ರದ ಜನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ