‘ಕಾಂಗ್ರೆಸ್ ಕಿತ್ತೊಗೆಯಲು ಪಣತೊಟ್ಟಿದ್ದೇವೆ’

Amitha sgah in chitradurga parivarthana rally

10-01-2018

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಬಿಜೆಪಿ ಪರಿವರ್ತನಾ ರ‍್ಯಾಲಿ ಉದ್ಘಾಟಿಸಿ ಮಾತಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಚಿತ್ರದುರ್ಗದ ಪವಿತ್ರ ನೆಲದಲ್ಲಿ ಯಡಿಯೂರಪ್ಪನವರ ಯಾತ್ರೆ ಬಂದಿದೆ. ಈ ಯಾತ್ರೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಪಣತೊಟ್ಟಿದೆ, ಈ ಯಾತ್ರೆಯಲ್ಲಿ ಸರ್ಕಾರದ ವಿರುದ್ಧ ಯುವ ಜನರು, ರೈತರು, ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.

ಜನ ಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕದ ಸರ್ಕಾರ ಸೋತಿದೆ, ನಿಮ್ಮೆಲ್ಲರ ಆಶೀರ್ವಾದದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಕೇಂದ್ರದಲ್ಲಿ ಸರ್ಕಾರ ಮಾಡಲು ಕರ್ನಾಟಕದ ಕೊಡುಗೆ ದೊಡ್ಡದಿದೆ ಎಂದ ಅವರು, ನಾನು ಕರ್ನಾಟಕದ ಮುಖ್ಯಮಂತ್ರಿಗೆ ಒಂದು ಸವಾಲ್ ಹಾಕುತ್ತೇನೆ, ಮೋದಿ ಸರ್ಕಾರ 2.19 ಲಕ್ಷ ಕೋಟಿ ಅನುದಾನವನ್ನು ನೀಡಿದೆ ಮುಖ್ಯಮಂತ್ರಿಯವರೇ ನಾವು ಕೊಟ್ಟಿರುವ ಹಣದ ಲೆಕ್ಕ ಕೊಡಿ, ಕೇಂದ್ರ ಸರ್ಕಾರದ ಯೋಜನೆಯಡಿ ಒಟ್ಟು 79 ಸಾವಿರ ಕೋಟಿ ಹಣ ಕೊಟ್ಟಿದ್ದೇವೆ. ಈ ಹಣ ಎಲ್ಲಿ ಹೋಗಿದೆ. ಒಟ್ಟು 3ಲಕ್ಷ ಕೋಟಿ ಕೊಟ್ಟಿದ್ದೇವೆ, ಉಜ್ವಲ ಯೋಜನೆಯಡಿ ಉಚಿತವಾಗಿ ಮೂರು ಲಕ್ಷ ಕುಟುಂಬಗಳಿಗೆ ಗ್ಯಾಸ್ ಕೊಟ್ಟಿದ್ದಾರೆ ಅದು ಎಲ್ಲಿ ಹೋಗಿದೆ, ನನಗೆ ಗೊತ್ತಿದೆ ಇವೆಲ್ಲವೂ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ಹೋಗಿದೆ ಎಂದು ಆರೋಪಿಸಿದ್ದಾರೆ.

ಮೋದಿ ಕಳಿಸಿರುವ ಹಣದ ಜೊತೆಗೆ ನೀವು ಕಟ್ಟಿದ ಕಂದಾಯದ ಹಣ ಕಾಂಗ್ರೆಸ್ ನವರು ತಿಂದು ಹಾಕಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು. ಮುಖ್ಯಮಂತ್ರಿಯವರಿಗೆ ಎಪ್ಪತ್ತು ಲಕ್ಷದ ವಾಚ್ ಉಡುಗೊರೆ ಬರುತ್ತೆದೆ ಅಂದರೆ ಅವರಿಗೆ ಎಂತಹ ಉದ್ಯಮಿಪತಿಗಳು ಸ್ನೇಹಿತರಿದ್ದಾರೆ ನೋಡಿ, ಅನ್ನಭಾಗ್ಯದ ಯೋಜನೆಯ ಅಕ್ಕಿ, ಗೋಧಿ ಕಾಂಗ್ರೆಸ್ ಪಕ್ಷದವರು ತಿಂದಿದ್ದಾರೆ. ಹೆಚ್.ಆಂಜನೇಯವರ ಪತ್ನಿ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ, ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ಆಗಿದೆ. ಸಾವಿರಾರು ಕೋಟಿ ಹಣ ಸಿಕ್ಕಿದೆ, ಗಣಿ ಹಗರಣದಲ್ಲಿ ಸಂತೋಷ್ ಲಾಡ್ ಸಿಕ್ಕಿ ಬಿದ್ದಿದ್ದಾರೆ ಇಂತಹವರನ್ನು ಸಿದ್ದರಾಮಯ್ಯ ಇನ್ನೂ ಸಚಿವ ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ. ಸಿಎಂ ತನ್ನ ಸಂಬಂಧಿಕರಿಗೆ ಎರಡೂವರೆ ಸಾವಿರ ಕೋಟಿ ಯೋಜನೆಯನ್ನ ಮಾಡಿಕೊಟ್ಟಿದ್ದಾರೆ. ಗೋವಿಂದ್ ರಾಜರ ಡೈರಿ ನೋಡಿದರೆ ಒಂದು ವಾರದವರೆಗೆ ಓದಬೇಕು ಅಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿಯ ಕಾರ್ಯಕರ್ತರ ಕೊಲೆಗಳಾಗಿದೆ. ಈ ಸರ್ಕಾರ ಹಿಂದು ವಿರೋಧಿ ಸರ್ಕಾರ, ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಎಸ್.ಡಿ.ಪಿ.ಐ ಮೇಲಿನ ಕೊಲೆ ಕೇಸ್ ಗಳನ್ನ ವಾಪಾಸ್ ತೆಗೆದುಕೊಂಡಿದೆ. ಮಂದಿರ ಆರ್ಚಕರ ಸಂಬಳ ನಾಲ್ಕು ತಿಂಗಳಿನಿಂದ ನಿಂತಿದೆ, ಓಟ್ ಬ್ಯಾಂಕ್ ರಾಜಕಾರಣದ ಕಾಂಗ್ರೆಸ್ ಸರ್ಕಾರವನ್ನ ಕಿತ್ತೊಗೆಯುವ ಕೆಲಸ ನಾವು ಮಾಡಬೇಕಿದೆ ಎಂದಿದ್ದು, ಹಿಂದುಳಿದ ವರ್ಗದ ಪರ ಸಂವಿಧಾನದ ತಿದ್ದುಪಡಿಗೆ ದೆಹಲಿಯಲ್ಲಿ ಕಾಂಗ್ರೆಸ್ ತಡೆದಿದೆ ಮತ್ತೆ ಬಿಜೆಪಿ ಸರ್ಕಾರವನ್ನ ತರಬೇಕು, ಕರ್ನಾಟಕ ಮುಕ್ತ ಕಾಂಗ್ರೆಸ್ ಮಾಡೋಣ ಎಂದು ಕಾಂಗ್ರೆಸ್ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ