ಮಲ್ಲಿಕಾ ಶೆರಾವತ್‌ ಬಾಡಿಗೆ ಪ್ರಕರಣ…

Actor Mallika Sherawat Evicted From Paris Flat

10-01-2018 1164

ನಿಮಗೆ ಬಾಲಿವುಡ್‌ನ ಬಿಚ್ಚಮ್ಮ ಮಲ್ಲಿಕಾ ಶೆರಾವಾತ್ ನೆನಪಿದೆ ತಾನೇ? ಆಕೆ, ತನ್ನ ಗಂಡ ರಿಯಲ್ ಎಸ್ಟೇಟ್ ಉದ್ಯಮಿ, ಸಿರಿಲ್ ಆಕ್ಸೆನ್‌ಫ್ಯಾನ್ಸ್ ಜೊತೆ ಪ್ಯಾರಿಸ್ ನಲ್ಲಿ ಕಳೆದ ಒಂದು ವರ್ಷದಿಂದ ನೆಲೆಸಿದ್ದಳು. ಆದರೆ, ಇದೀಗ ಮಲ್ಲಿಕಾ ಶೆರಾವತ್ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಅವರನ್ನು ಹೊರಹಾಕುವಂತೆ ಸ್ಥಳೀಯ ಕೋರ್ಟ್ ಆದೇಶ ನೀಡಿದೆ. ಅಪಾರ್ಟ್‌ಮೆಂಟಿನ ಬಾಡಿಗೆ ನೀಡದೇ ಇರುವುದೇ ಇದಕ್ಕೆ ಕಾರಣವಂತೆ.

ಮಲ್ಲಿಕಾ ಶೆರಾವತ್, ತಿಂಗಳಿಗೆ 6,054 ಯೂರೋಗಳು, ಅಂದರೆ ಸುಮಾರು 4.5 ಲಕ್ಷ ರೂಪಾಯಿಗಳ ಬಾಡಿಗೆ ನೀಡಬೇಕಾಗಿತ್ತು, ಆದರೆ, ಒಂದೇ ಒಂದು ಬಾರಿ  2,715 ಯೂರೋಗಳನ್ನು ಕೊಟ್ಟಿದ್ದು ಬಿಟ್ಟರೆ, ಇಲ್ಲಿಯವರೆಗೆ ಒಂದು ‘ನಯಾ ಪೈಸೆ’ ಕೊಟ್ಟಿಲ್ಲ ಎಂದು ಅಪಾರ್ಟ್‌ಮೆಂಟ್ ಮಾಲೀಕ ಕೋರ್ಟ್ ಮೆಟ್ಟಿಲು ಹತ್ತಿದ್ದ. ಈ ಜೋಡಿ, ಸದ್ಯಕ್ಕೆ ಅಪಾರ್ಟ್‌ಮೆಂಟ್‌ನಿಂದ ತಮ್ಮನ್ನು ಹೊರಹಾಕುವುದರ ವಿರುದ್ಧ ಮನವಿ ಸಲ್ಲಿಸಬಹುದು, ಏಕೆಂದರೆ, ಸ್ಥಳೀಯ ಕಾಯ್ದೆ ಪ್ರಕಾರ ಚಳಿಗಾಲ ಮುಗಿಯುವವರೆಗೆ ಅಂದರೆ, ಮಾರ್ಚ್‌31ರವರೆಗೆ ಯಾರನ್ನೂ ಮನೆಯಿಂದ ಹೊರಹಾಕುವಂತಿಲ್ಲ. ಅದೂ ಸರಿಯೇ ಬಿಡಿ, ಮೊದಲೇ ಬಟ್ಟೆಯೆಂದರೆ ಮಲ್ಲಿಕಾಗೆ ಅಲರ್ಜಿ, ಹೀಗಿರುವಾಗ ಚಳಿಗಾಲದಲ್ಲಿ ಆಕೆ ಹೋಗುವುದಾದರೂ ಎಲ್ಲಿಗೆ.


ಸಂಬಂಧಿತ ಟ್ಯಾಗ್ಗಳು

mallika sharavah Actor ಅಪಾರ್ಟ್‌ಮೆಂಟ್‌ ಕೋರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ