ತನ್ವೀರ್ ಸೇಠ್ ಗೆ ಕೊಲೆ ಬೆದರಿಕೆ ಕರೆ..!

Minister Tanveer Sait gets threat call, files complaint

10-01-2018

ಮೈಸೂರು: ವಿದೇಶಿ ದೂರವಾಣಿ ಸಂಖ್ಯೆಯಿಂದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಕೊಲೆ ಬೆದರಿಕೆ ಒಡ್ಡಿರುವುದು ಬೆಳಕಿಗೆ ಬಂದಿದೆ. ಕರೆ ಮಾಡಿ 10 ಕೋಟಿ ರೂ.ನೀಡಬೇಕು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಸಂಬಂಧ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ತನ್ವೀರ್ ಸೇಠ್ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೊಬೈಲ್ಗೆ ವಿದೇಶದ ದೂರವಾಣಿ ಸಂಖ್ಯೆಯಿಂದ ಮೆಸೇಜ್ ಹಾಗೂ ಕರೆ ಮಾಡಿ ಜೀವ ಬೆದರಿಕೆಯೊಡ್ಡುತ್ತಿದ್ದಾರೆ. ಕರೆ ಮಾಡುತ್ತಿರುವ ವ್ಯಕ್ತಿ ತನ್ನನ್ನು ರವಿ ಪೂಜಾರಿ ಎಂದು ಹೇಳಿಕೊಳ್ಳುತ್ತಿದ್ದು, ಕೂಡಲೇ 10 ಕೋಟಿ ರೂಪಾಯಿ ನೀಡಬೇಕು, ಹಣ ಕೊಡದಿದ್ದರೆ ನಮ್ಮ ಜನ ನಿಮ್ಮನ್ನು ಸಾಯಿಸುತ್ತಾರೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.

ಬೆದರಿಕೆ ಕರೆ ಬಂದ ಹಿನ್ನೆಲೆ ನಾನು ಪೋಲೀಸರಿಗೆ ದೂರನ್ನು ಕೂಡ ನೀಡಿದ್ದೇನೆ. ನಾನು ಯಾರ ಜೊತೆಯಲ್ಲಿಯೂ ದ್ವೇಷ ಕಟ್ಟಿಕೊಂಡಿಲ್ಲ. ನನ್ನ ಬಳಿ ಹಣ ಬೇಡಿಕೆಯೊಡ್ಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Tanveer Sait threatening call ದೂರವಾಣಿ ಜೀವ ಬೆದರಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ