ಸಿದ್ದುಗೆ ಬಿಎಸ್ ವೈ ಸವಾಲ್..!10-01-2018

ಚಿತ್ರದುರ್ಗ: ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಹೋರಾಟಕ್ಕೆ ಕಟ್ಟಿದ ಪಕ್ಷ, ರಾಜಕೀಯ ಮಾಡಲು ಕಟ್ಟಿದ ಪಕ್ಷವಲ್ಲ ಎಂದು ಮಹಾತ್ಮ ಗಾಂಧಿ ಹೇಳಿದ್ದರು, ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದಿರೋದು ಎರಡೇ ಸೀಟು, ಆದರೆ ಯೋಗಿ ಆದಿತ್ಯ ನಾಥ್ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ನವರೆ ನಿಮ್ಮ ಮಾತಿಗೆ ಇತಿಮಿತಿ ಇರಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ಸಿಗರು ಜಾತಿ ರಾಜಕಾರಣ ಮಾಡುತ್ತಿದ್ದಾರೆ, ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಸಿದ್ದರಾಮಯ್ಯನವರೇ ನಿಮ್ಮ ಯೋಗ್ಯತೆಗೆ ರಾಜ್ಯ ಖಜಾನೆ ಖಾಲಿ ಮಾಡಿದ್ದೀರಿ. ಎಂ.ಎಲ್.ಎ, ಎಂಪಿ ಪಿ.ಎಗಳಿಗೆ ಸಂಬಳ ಕೊಟ್ಟಿಲ್ಲ. ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದೀರಿ. ನಂಬಿಕೆ ದ್ರೂಹ, ವಿಶ್ವಾಸ ದ್ರೋಹ ಮಾಡಿ ಆಳ್ವಿಕೆ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದು. ಚುನಾವಣಗೆ ಮೂರು ತಿಂಗಳಿರುವಾಗ ಹಿಂದೂಗಳ ನೆನಪಾಯ್ತಾ ನಿಮಗೆ ಎಂದು ಕುಟುಕಿದ್ದಾರೆ. ಭಾರತದ ಅತೀ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಗುಡುಗಿದ ಅವರು, ನಿಮ್ಮ ಎಲ್ಲಾ ಭ್ರಷ್ಟಾಚಾರ ಬಯಲಿಗೆಳೆದು ತನಿಖೆ ಮಾಡಿಸದೇ ಇದ್ದರೆ ನನ್ನನ್ನು ಯಡಿಯೂರಪ್ಪ ಅಂತ ಕರಿಬೇಡಿ ಸಿದ್ದರಾಮಯ್ಯನವರೇ ಎಂದು ಸವಾಲು ಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

yeddyurappa siddaramaiah ಮಹಾತ್ಮ ಗಾಂಧಿ ದಂಧೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ