ಮತ್ತೊಂದು ಸಾಧನೆ ಹೊಸ್ತಿಲಲ್ಲಿ ಇಸ್ರೊ

31 satellites to be launched by ISRO

09-01-2018

ಭಾರತದ ಹೆಮ್ಮೆಯ ಇಸ್ರೊ ಅಂದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇದೇ ಜನವರಿ 12ರಂದು ಒಂದೇ ಬಾರಿಗೆ 31 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಭಾರತದ ಕಾರ್ಟೊಸ್ಯಾಟ್ ಮತ್ತು ಅಮೆರಿಕ ಹಾಗೂ ಇತರೆ 5 ದೇಶಗಳಿಗೆ ಸೇರಿದ ಉಪಗ್ರಹಗಳು, ಪೊಲಾರ್ ಸೆಟಲೈಟ್ ಲಾಂಚ್ ವೆಹಿಕಲ್ PSLV-C40 ಮೂಲಕ, ಇದೇ ಜನವರಿ 12ರ ಶುಕ್ರವಾರ ಬೆಳಗ್ಗೆ 9.30ಕ್ಕೆ ಶ್ರೀಹರಿಕೋಟದಿಂದ ಉಡಾವಣೆಯಾಗಲಿವೆ. ಸುಮಾರು 700 ಕೆಜಿಗಳಷ್ಟು ತೂಕವಿರುವ ಕಾರ್ಟೊಸ್ಯಾಟ್ -2, ದೂರಸಂವೇದಿ ಉಪಗ್ರಹವಾಗಿದ್ದು, ಎರಡು ಅಡಿಯಷ್ಟು ಅಗಲ ಇರುವ ವಸ್ತುಗಳನ್ನೂ ಗುರುತಿಸುವಂಥ ಸಾಮರ್ಥ್ಯ ಹೊಂದಿರುತ್ತದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಇಸ್ರೊ, ಒಂದೇ ಬಾರಿಗೆ 104 ಉಪಗ್ರಹಗಳನ್ನು ಉಡಾಯಿಸಿ ದಾಖಲೆ ಸೃಷ್ಟಿಸಿತ್ತು. ಹೊರದೇಶಗಳ ಹಲವಾರು ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಇಸ್ರೊದವರು ಕಳೆದ ವರ್ಷ ಸುಮಾರು 300 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಇದಕ್ಕಿಂತ ಹಿಂದಿನ ವರ್ಷ(2015-16)ರಲ್ಲಿ 420 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದ್ದರು. ಇಸ್ರೊ, ಈವರೆಗೆ ಅಲ್ಜೀರಿಯ, ಕೆನಡ, ಜರ್ಮನಿ, ಇಂಡೋನೇಷಿಯ, ಇಸ್ರೇಲ್, ನೆದರ್ಲೆಂಡ್, ಖಜಕ್‌ಸ್ತಾನ್, ಯಎಇ ಮತ್ತು ಅಮೆರಿಕ ದೇಶಗಳಿಗೆ ಸೇರಿದ 200ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಿದೆ.

 


ಸಂಬಂಧಿತ ಟ್ಯಾಗ್ಗಳು

isro satelites ಖಜಕ್‌ಸ್ತಾನ್ ಕಾರ್ಟೊಸ್ಯಾಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ