ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ಸ್ವೇಚ್ಚಾಚಾರ !

Kannada News

19-04-2017

ಬಳ್ಳಾರಿ :  ವಿಶ್ವ ವಿಖ್ಯಾತ ಹಂಪಿ ಬರಬರುತ್ತಾ ಅನೈತಿಕ ತಾಣವಾಗುತ್ತಿದೆಯ್ಯಾ ? ಹೌದು, ಇತಂಹ ಅನುಮಾನಗಳು ಇದೀಗ ಮೂಡಿವೆ, ಯಾಕಂದ್ರೆ ನಿನ್ನೆ ಸಂಜೆ ವಿದೇಶಿ ಪ್ರವಾಸಿಗರು ವಿಶ್ವ ಪ್ರಸಿದ್ದಿ ವಿರೂಪಾಕ್ಷೇಶ್ವರ ದೇವಾಲಯದಲ್ಲೆ ಕೈಯಲ್ಲಿ ಬೀರ್ ಬಾಟಲಿ ಹಿಡಿದುಕೊಂಡು ದೇವಸ್ಥಾನದ ಆವರಣದಲೆಲ್ಲಾ ಮಧ್ಯಸೇವನೆ ಮಾಡುತ್ತಾ ಓಡಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾಣರವಾಗಿದೆ, ಅಲ್ಲದೇ ದೇವಸ್ಥಾನದ ಪ್ರಾಗಂಣದಲ್ಲೆಲ್ಲಾ ಚಪ್ಪಲಿ ಧರಿಸಿಕೊಂಡು ನಡೆದಾಡಿದ್ದು ಸಹ ವಿದೇಶಿ ಪ್ರವಾಸಿಗರ ಸ್ವೇಚ್ಚಾಚಾರವನ್ನು ಎತ್ತಿತೋರಿಸುತ್ತಿತ್ತು,  ದೇವಸ್ಥಾನದಲ್ಲಿ ಹತ್ತಾರು ಕಾವಲುಗಾರರು, ಹಾಗೂ ದಾರ್ಮಿಕ ದತ್ತಿ ಇಲಾಖೆ ಕಚೇರಿಯಿದ್ದರೂ ಸಹ ಯಾರೊಬ್ಬರು ಸಹ ವಿದೇಶಿ ಪ್ರವಾಸಿಗರ ಸ್ವೇಚ್ಚಾಚಾರವನ್ನು ವಿರೋಧಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ದೇವಸ್ಥಾನದ ಆವರಣದಲ್ಲಿ ಮಧ್ಯಪಾನ, ಚಪ್ಪಲಿಯನ್ನು ನಿಷೇಧಿಸಿದ್ರೂ ವಿದೇಶಿ ಪ್ರವಾಸಿಗರು ಕ್ಯಾರೆ ಎನ್ನದೇ ವರ್ತನೆ ಮಾಡುತ್ತಿದ್ದಾರೆ, ಅಲ್ಲದೇ ವಿದೇಶಿ ಪ್ರವಾಸಿಗರು ಪ್ರವಾಸದ ನೆಪದಲ್ಲಿ ಹಂಪಿಯಲ್ಲಿ ಸ್ವೇಚ್ಚಾಚಾರದಿಂದ ವರ್ತನೆ ಮಾಡುತ್ತಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ