ತಾಯಿಯನ್ನೇ ಕೊಲೆಗೈದ ಮಗ

Mother murdered by his own son

09-01-2018

ಬೆಂಗಳೂರು: ಆಡುಗೋಡಿಯ ಅಂಬೇಡ್ಕರ್ ನಗರದಲ್ಲಿ ಮದ್ಯಪಾನ ಮಾಡಲು ಹಣ ಕೊಡದಿದ್ದಕ್ಕೆ ರೊಚ್ಚಿಗೆದ್ದ ಮಗ ತಾಯಿಯನ್ನು ಕೊಲೆ ಮಾಡಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂಬೇಡ್ಕರ್ ನಗರದ ಮನೆಯಲ್ಲಿ ತಾಯಿ ಲಕ್ಷ್ಮೀ (80)ಯ ತಲೆಯನ್ನು ಗೋಡೆಗೆ ಗುದ್ದಿ ಕೊಲೆಗೈದ ಮಗ ಸೆಲ್ವರಾಜ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಜನವರಿ 4ರಂದು ಮಧ್ಯಾಹ್ನ ಕುಡಿದ ಅಮಲಿನಲ್ಲಿ ಬಂದ ಕೂಲಿ ಕೆಲಸ ಮಾಡುತ್ತಿದ್ದ ಸೆಲ್ವರಾಜ್, ತಾಯಿ ಲಕ್ಷ್ಮೀ ಯನ್ನು ಹಣಕ್ಕಾಗಿ ಪೀಡಿಸಿದ್ದಾನೆ.

ಯಾವಾಗಲೂ ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಮಗನ ವರ್ತನೆಯಿಂದ ಬೇಸತ್ತಿದ್ದ  ಲಕ್ಷ್ಮೀ ಹಣ ಕೊಡಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡು ಆಕೆಯನ್ನು ಹಿಡಿದು ಏಳೆದಾಡಿ ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ತಲೆಗೆ ಗಂಭೀರವಾಗಿ ಗಾಯಗೊಂಡು ಕುಸಿದುಬಿದ್ದ ಲಕ್ಷ್ಮೀಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder drunk ಡಿಸಿಪಿ ಡಾ.ಬೋರಲಿಂಗಯ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ