ವಿಕೋಪಕ್ಕೆ ತಿರುಗಿದ ಪ್ರತಿಭಟನೆ

Bidar bandh and violence

09-01-2018

ಬೀದರ್: ವಿಜಯಪುರದ ಬಾಲಕಿ ದಾನಮ್ಮ ಅತ್ಯಾಚಾರ-ಕೊಲೆ, ಅನಂತ ಕುಮಾರ್ ಸಂವಿಧಾನ ಬದಲಾವಣೆ ಕುರಿತ ಹೇಳಿಕೆ, ಭೀಮಾ ಕೋರೆಗಾಂವ್ನ ಹಿಂಸಾಚಾರ, ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ, ಬೀದರ್ ನಗರ, ಭಾಲ್ಕಿ ಬಂದ್ ಹಿನ್ನೆಲೆ, ದಲಿತ ಪರ ಸಂಘಟನೆಗಳ ಪ್ರತಿಭಟನೆಗಳು ವಿಕೋಪಕ್ಕೆ ತಿರುಗಿವೆ. ಜಿಲ್ಲೆಯ ಆರ್ಯುವೇದಿಕ ಕಾಲೇಜ್, ಪಿಜಿ ಸೆಂಟರ್ಗಳಿಗೆ ನುಗ್ಗಿದ ದಲಿತ ಸಂಘಟನಾಕಾರರು ಧಾಂದಲೆ ನಡೆಸಿ, ಕಾಲೇಜು ಕಟ್ಟಡದ ಗಾಜುಗಳನ್ನು ಒಡೆದ ಹಾಕಿದ್ದಾರೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಮತ್ತು ಕಾಲೇಜ್ ಸಿಬ್ಬಂದಿ ಆತಂಕಗೊಂಡಿದ್ದಾರೆ. ಅದಲ್ಲದೇ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿಪುಡಿ ಮಾಡಿದ್ದಾರೆ. ಇದರಿಂದ ಬೀದರ್ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ.

ಇನ್ನು ಬೀದರ್ ಬಂದ್ ವೇಳೆ ಮಾಜಿ ಶಾಸಕ ಸುಭಾಸ್ ಕಲ್ಲೂರು ಅವರ ಕಾರಿಗೆ ಕಲ್ಲು, ಬಡಿಗೆಯಿಂದ ಒಡೆದು ಗಾಜು ಪುಡಿ ಪುಡಿ ಮಾಡಿದ್ದಾರೆ. ಘಟನೆಯಲ್ಲಿ ಮಾಜಿ ಶಾಸಕರಿಗೆ ಯಾವುದೇ ಗಾಯಗಳಾಗಲಿಲ್ಲ. ಇನ್ನು ದಲಿತ ಸಂಘಟನೆ ಕಾರ್ಯಕರ್ತರಿಂದ ಸಾರ್ವಜನಿಕರ ಮೇಲೂ ಹಲ್ಲೆಯ ಮಾಡಿರುವ ಆರೋಪ, ಕೇಳಿಬಂದಿದ್ದು, ಹಲ್ಲೆ ಮಾಡಿದವರ ವಿರುದ್ಧ ಗಾಂಧಿಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ  ಬೀದರ್ ಬಂದ್ ನಿಂದ ಬಿಗಿವಿನ ವಾತಾವರಣ ನಿರ್ಮಾಣವಾಗಿದೆ.


ಸಂಬಂಧಿತ ಟ್ಯಾಗ್ಗಳು

bandh voilance ಪ್ರತಿಭಟನೆ ಪುಡಿಪುಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ